February 4, 2026

ಕಾಸರಗೋಡು: ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಇಬ್ಬರು ಆರೋಪಿಗಳ ಬಂಧನ

0
image_editor_output_image1496758029-1689781665351.jpg


 
ಕಾಸರಗೋಡು: ಹಲವಾರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಇಬ್ಬರನ್ನು ರಿವಾಲ್ವರ್ ಸಹಿತ ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮೀಯಪದವಿನ ಅಬ್ದುಲ್ ರಹೀಮ್(36) ಮತ್ತು ಬಂದ್ಯೋಡು ಅಡ್ಕದ ಅಬ್ದುಲ್ ಲತೀಫ್ (32) ಬಂಧಿತರು.

ಅಬ್ದುಲ್ ಲತೀಫ್ ನನ್ನು ಕೋಜಿಕ್ಕೋಡ್ ನ ವಸತಿಗೃಹದಿಂದ ಬಂಧಿಸಲಾಗಿದ್ದು , ಈತ ನೀಡಿದ ಮಾಹಿತಿಯಂತೆ ಅಬ್ದುಲ್ ರಹೀಮ್ ನನ್ನು ಬಂಧಿಸಲಾಗಿದೆ.
ಈತನ ಬಳಿಯಿಂದ ರಿವಾಲ್ವರ್, ಸಜೀವ ಗುಂಡು ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಹೀಮ್ ವಿರುದ್ಧ ಸುಳ್ಯ , ಪುತ್ತೂರು , ವಿಟ್ಲ, ಮಂಜೇಶ್ವರ ಪೊಲೀಸ್ ಠಾಣೆ ಗಳಲ್ಲಿ ಹದಿನೈದಕ್ಕೂ ಅಧಿಕ ಪ್ರಕರಣಗಳು , ಐದು ವಾರಂ ಟ್ ಗಳು ಜಾರಿಯಲ್ಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಾಫಾ ಕಾಯ್ದೆಯಂತೆ ಬಂಧಿತನಾಗಿ ಜೈಲಿನಲ್ಲಿದ್ದ ಅಬ್ದುಲ್ ರಹೀಮ್ ನನ್ನು ಒಂದು ವರ್ಷದ ಹಿಂದೆ ಬಿಡುಗಡೆಗೊಂಡಿದ್ದನು.
ಎಂಟು ತಿಂಗಳ ಹಿಂದೆ ಮೀಯಪದವು ಬಾಳಿಯೂರಿನಲ್ಲಿ ಕೆಂಗಲ್ಲು ಸಾಗಾಟ ಲಾರಿ ಅಪಹರಿಸಿ ಚಾಲಕನ ಹಣ , ಮೊಬೈಲ್ ದರೋಡೆ ಮಾಡಿದ ಪ್ರಕರಣದ ಆರೋಪಿಯಾಗಿದ್ದಾನೆ. ಎರಡು ವರ್ಷಗಳ ಹಿಂದೆ ಮೀಯಪದವಿನಲ್ಲಿ ಅಂದು ಕಾಸರಗೋಡು ಡಿ ವೈ ಎಸ್ಪಿ ಯಾಗಿದ್ದ ಪಿ . ಪಿ ಸದಾನಂದನ್ ನೇತೃತ್ವದ ಪೊಲೀಸ್ ತಂಡ ಬಂಧಿಸಲು ಮುಂದಾದಾಗ ರಹೀಮ್ ಮತ್ತು ಈತನ ಸಹಚರರು ಪೊಲೀಸರತ್ತ ಗುಂಡು ಹಾರಿಸಿ ಬಿಯರ್ ಬಾಟ್ಲಿ ಎಸೆದು ಕರ್ನಾಟಕಕ್ಕೆ ಪರಾರಿಯಾಗಿ ತಲೆ ಮರೆಸಿಕೊಂಡಿದ್ದರು. ಪರಾರಿಯಾಗುವ ಮಧ್ಯೆ ವಿಟ್ಲ ಪೋಲೀಸರ ಮೇಲೆಯೂ ಹಲ್ಲೆ ನಡೆಸಿದ್ದರು.”

Leave a Reply

Your email address will not be published. Required fields are marked *

You may have missed

error: Content is protected !!