March 24, 2026

81 ನಾಡಬಾಂಬ್‍ಗಳ ವಶ: ಇಬ್ಬರು ಆರೋಪಿಗಳ ಬಂಧನ

0
image_editor_output_image-235338429-1689742511369.jpg

ಚಿತ್ರದುರ್ಗ: ಕಾಡು ಹಂದಿ ಬೇಟೆಗಾಗಿ ಸಂಗ್ರಹಿಸಿಡಲಾಗಿದ್ದ 81 ನಾಡಬಾಂಬ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿರುವ ಪ್ರಕರಣ ಮೊಳಕಾಲ್ಮೂರು ತಾಲೂಕಿನ ದೇವಸಮುದ್ರ ಗ್ರಾಮದಲ್ಲಿ ನಡೆದಿದೆ.

ಪ್ರಕರಣ ಸಂಬಂಧ ಸುಮನ್ ಹಾಗೂ ಆಂಧ್ರಪ್ರದೇಶ ಮೂಲದ ಗಂಗಣ್ಣ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಆರೋಪಿ ಸುಮನ್ ಎಂಬಾತನ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಈ ವೇಳೆ ಬಾಂಬ್‍ಗಳು ಪತ್ತೆಯಾಗಿವೆ. ಬಾಂಬ್‍ಗಳು ಆಂಧ್ರ ಮೂಲದಿಂದ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!