ವಿಟ್ಲ: ಕಂಬಳಬೆಟ್ಟು ಮೊಹಿಯುದ್ದೀನ್ ಮತ್ತು ಇಬ್ರಾಹೀಂ ಜಮಾಅತ್ ಕಮಿಟಿ ನೂತನ ಅಧ್ಯಕ್ಷರಾಗಿ ಡಾ.ಅಬ್ದುಲ್ ಬಷೀರ್ ವಿ.ಕೆ ಆಯ್ಕೆ
ವಿಟ್ಲ: ಕಂಬಳಬೆಟ್ಟು ಮೊಹಿಯುದ್ದೀನ್ ಮತ್ತು ಇಬ್ರಾಹೀಂ ಜಮಾಅತ್ ಕಮಿಟಿಯ ನೂತನ ಅಧ್ಯಕ್ಷರಾಗಿ ಜನಪ್ರಿಯ ಫೌಂಡೇಶನ್ ನ ಡಾ.ಅಬ್ದುಲ್ ಬಷೀರ್ ವಿ.ಕೆ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜೂಲೈ 18 ಮಂಗಳವಾರದಂದು ಕಂಬಳಬೆಟ್ಟು ಜಮಾಅತಿನ ಗೌರವಾಧ್ಯಕ್ಷರಾದ ಅಸ್ಸಯ್ಯದ್ ಆಟಕೋಯ ತಂಗಳ್ ಕುಂಬೋಳ್ ರವರ ನೇತೃತ್ವದಲ್ಲಿ ಮಸೀದಿ ಆವರಣದಲ್ಲಿ ನಡೆದ ಮಹಾಸಭೆಯಲ್ಲಿ ಚರ್ಚಿಸಿ ಒಮ್ಮತದಿಂದ ಬದ್ರಿಯಾ ಮನೆತನದ ಪ್ರಸ್ತುತ ಹಾಸನದಲ್ಲಿ ಜನಪ್ರಿಯ ಆಸ್ಪತ್ರೆ ನಡೆಸುತ್ತಿರುವ ಹಿರಿಯ ವೈದ್ಯ ಡಾ.ಅಬ್ದುಲ್ ಬಷೀರ್ ಜನಪ್ರಿಯ ರವರನ್ನು ಜಮಾಅತಿನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಕಂಬಳಬೆಟ್ಟು ಮೊಹಿಯುದ್ದೀನ್ ಮತ್ತು ಇಬ್ರಾಹೀಂ ಜಮಾಅತ್ ಕಮಿಟಿಯ ಅಡಿಯಲ್ಲಿ ಮಸೀದಿ, ಮದರಸಾಗಳು, ಇತಿಹಾಸ ಪ್ರಸಿಧ್ಧ ಕಂಬಳಬೆಟ್ಟು ದರ್ಗಾ ಕಾರ್ಯನಿರ್ವಹಿಸುತ್ತಿದ್ದು ಜಮಾಅತ್ ಕಮಿಟಿಯ ನೇತ್ರತ್ವವನ್ನು ಹಿರಿಯ ವೈದ್ಯ ಡಾ.ಅಬ್ದುಲ್ ಬಷೀರ್ ರವರಿಗೆ ವಹಿಸಲಾಗಿದೆ.
ಡಾ.ಅಬ್ದುಲ್ ಬಷೀರ್ ರವರು ಮೂಲತಃ ಕಂಬಳಬಟ್ಟುವಿನವರಾಗಿದ್ದು ಬದ್ರಿಯಾ ಮನೆತನದ ಅಂದುಂಞಿ ಹಾಜಿ ಬದ್ರಿಯಾರವರ ಕಿರಿಯ ಮಗ. ಪ್ರಸ್ತುತ ಹಾಸನದಲ್ಲಿ ಜನಪ್ರಿಯ ಫೌಂಡೇಶನ್ ಮುಖಾಂತರ ಜನಪ್ರಿಯ ಆಸ್ಪತ್ರೆ, ಹುಟ್ಟೂರು ಕಂಬಳಬೆಟ್ಟುವಿನಲ್ಲಿ ಜನಪ್ರಿಯ ಸೆಂಟ್ರಲ್ ಶಾಲೆಯನ್ನು ನಡೆಸುತ್ತಿದ್ದು ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅಖಿಲ ಭಾರತ ವೈದ್ಯಕೀಯ ಸಂಘ ಹಾಸನ ಜಿಲ್ಲಾಧ್ಯಕ್ಷರಾಗಿರುವ ಇವರ ವೈದ್ಯಕೀಯ ಮತ್ತು ಸಮಾಜಿಕ ಸೇವೆಯನ್ನು ಗುರುತಿಸಿ ಜಿಲ್ಲಾಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ, ವೈದ್ಯಶ್ರೇಷ್ಠ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿರುತ್ತಾರೆ.




