March 24, 2026

ಕುಂದಾಪುರ: ಮರವಂತೆ ಬೀಚ್ ನಲ್ಲಿ ಈಜಲು ಹೋದ ಯುವಕ ಸಮುದ್ರಪಾಲು

0
image_editor_output_image1869200365-1689742759655.jpg

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮರವಂತೆ ಬೀಚ್ ನಲ್ಲಿ ಈಜಲು ಹೋದ ಗದಗದ ಯುವಕ ಸಮುದ್ರಪಾಲು ಆದ ಘಟನೆ ಜು.18ರಂದು ನಡೆದಿದೆ.

ಗದಗ ಜಿಲ್ಲೆಯ ಮುಂಡ್ರಂಗಿ ತಾಲೂಕು ಮೇವಂಡಿ ಗ್ರಾಮದ ನಿವಾಸಿ ಪೀರ್ ನದಾಫ್ ನೀರುಪಾಲಾದ ಯುವಕ ಎಂದು ಗುರುತಿಸಲಾಗಿದೆ

ಗದಗ ಮೂಲದ ಮೂವರು ಯುವಕರು ನಿನ್ನೆ ಮಧ್ಯಾಹ್ನ ವೇಳೆ ಮರವಂತೆ ಬೀಚ್ ನಲ್ಲಿ ಈಜಲು ಇಳಿದಿದ್ದರು.

ಈ ವೇಳೆ ಅಲೆಯ ಅಬ್ಬರಕ್ಕೆ ಓರ್ವ ಯುವಕ ಕೊಚ್ಚಿಕೊಂಡು ಹೋಗಿದ್ದಾನೆ.

ಬಳಿಕ ಸ್ಥಳೀಯ ಆಂಬುಲೆನ್ಸ್ ಡೈವರ್ ಸಮಾಜಸೇವಕ ಇಬ್ರಾಹಿಂ ಗುಂಗೊಳ್ಳಿ ಹಾಗೂ ತಂಡ, ಜೀವ ರಕ್ಷಕ ಈಜುತಜ್ಞ ದಿನೇಶ್ ಖಾರ್ವಿ ಹಾಗೂ ತಂಡ ಮತ್ತು ಅಗ್ನಿಶಾಮಕ ದಳ ಮತ್ತು ಕೋಸ್ಟಲ್ ಗಾರ್ಡ್ ಸಿಬ್ಬಂದಿಗಳು, ಹಾಗೂ ಗಂಗೊಳ್ಳಿ ಪೊಲೀಸರು ಹುಡುಕಾಟ ಕಾರ್ಯಚರಣೆ ನಡೆಸಿದ್ದಾರೆ.

ಆದರೆ ಇನ್ನೂ ನೀರುಪಾಲಾದ ವ್ಯಕ್ತಿಯ ಮೃತದೇಹ ಪತ್ತೆಯಾಗಿಲ್ಲ.

ಇದೀಗ ಶೋಧ ಕಾರ್ಯ ಮುಂದುವರಿದಿದೆ.

Leave a Reply

Your email address will not be published. Required fields are marked *

error: Content is protected !!