March 13, 2026

ಮನೆ ಮುಂದೆಯೇ ಶಾಲಾ ಬಸ್  ಢಿಕ್ಕಿ: 8 ವರ್ಷದ ಬಾಲಕಿ ಸಾವು

0
image_editor_output_image-674983159-1689312958636.jpg

ತಿರುವನಂತಪುರಂ: ಶಾಲೆಯಿಂದ ವಾಪ್ಸಾಗುತ್ತಿದ್ದ ಪುಟ್ಟ ಕಂದಮ್ಮನಿಗೆ ಮನೆ ಮುಂದೆಯೇ ಶಾಲಾ ಬಸ್ ಡಿಕ್ಕಿ ಹೊಡೆದ ಪರಿಣಾಮ ಆಕೆ ಮೃತಪಟ್ಟ ಘಟನೆ ಕೇರಳದಲ್ಲಿ ನಡೆದಿದೆ.

ಬಾಲಕಿಯನ್ನು ದಿಯಾ (8) ಎಂದು ಗುರುತಿಸಲಾಗಿದೆ. ಈಕೆ ತಲಕ್ಕೊಟ್ಟುಕರದ ಒಐಇಟಿ ಪಬ್ಲಿಕ್ ಸ್ಕೂಲ್‍ನಲ್ಲಿ 2ನೇ ತರಗತಿ ಓದುತ್ತಿದ್ದಾಳೆ. ಈ ಘಟನೆ ವೇಲೂರು ಎಂಬಲ್ಲಿ ಬುಧವಾರ ಸಂಜೆ 4 ಗಂಟೆ ಸುಮಾರಿಗೆ ನಡೆದಿದೆ.

ಪ್ರತಿನಿತ್ಯದಂತೆ ದಿಯಾ ನಿನ್ನೆ ಕೂಡ ಸಂಜೆ ಶಾಲಾ ಬಸ್‍ನಿಂದ ಇಳಿದು ರಸ್ತೆ ದಾಟುತ್ತಿದ್ದಳು. ಆದರೆ ಈಕೆ ರಸ್ತೆ ದಾಟುತ್ತಿರುವುದನ್ನು ಗಮನಿಸಿದ ಡ್ರೈವರ್ ಏಕಾಏಕಿ ಬಸ್ ಚಲಾಯಿಸಿದ್ದಾನೆ. ಪರಿಣಾಮ ಬಸ್ ಬಾಲಕಿಗೆ ಡಿಕ್ಕಿ ಹೊಡೆದಿದೆ.

Leave a Reply

Your email address will not be published. Required fields are marked *

error: Content is protected !!