March 13, 2026

ಇಬ್ಬರು ಪತ್ನಿಯರಿಂದಲೇ ಕೊಲೆಯಾದ ಪತಿ

0
image_editor_output_image1012963137-1689054689760.jpg

ಪಾಟ್ನ: ಇಬ್ಬರು ಹೆಂಡತಿಯರ ಮುದ್ದಿನ ಗಂಡನಾಗಿದ್ದ ವ್ಯಕ್ತಿಯೊಬ್ಬ ಮೊದಲ ಹೆಂಡತಿಯರಿಂದಲೇ ಬರ್ಬರವಾಗಿ ಕೊಲೆಯಾಗಿರುವ ಘಟನೆ ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಛಾಪ್ರಾ ಜಿಲ್ಲೆಯ ಮಹಿಳೆಯರು ಗಂಡನಿಂದ ಬೇರ್ಪಟ್ಟು ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದರು. ಇತೀಚೆಗೆ ಬಕ್ರೀದ್‌ ಹಬ್ಬಕ್ಕೆ ತವರಿಗೆ ಮರಳಿದಾಗ ಪೊಲೀಸರು ಸಲ್ಮಾ ಹಾಗೂ ಅಮೀನಾ ಇಬ್ಬರೂ ಪತ್ನಿಯರನ್ನ ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ.

ಬೆಡ್ವಾಲಿಯಾ ರಾಯಪುರ ನಿವಾಸಿ ಅಲಂಗೀರ್ ಅನ್ಸಾರಿ (45), ಸರನ್ ಜಿಲ್ಲೆಯ ಚಿಂತಮಂಗಂಜ್ ಗ್ರಾಮದ ನಿವಾಸಿ ಸಲ್ಮಾಳೊಂದಿಗೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು.

ಮದುವೆಯಾದ 10 ವರ್ಷಗಳ ವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. ನಂತರ ಅಲಂಗೀರ್‌ ಮತ್ತು ಸಲ್ಮಾ ನಡುವೆ ಮನಸ್ತಾಪ ಶುರುವಾಗಿತ್ತು. ಹಾಗಾಗಿ ಸಲ್ಮಾ ಪತಿಯನ್ನ ತೊರೆದು ಬೇರೆ ಸ್ಥಳದಲ್ಲಿ ವಾಸ ಮಾಡಿಕೊಂಡಿದ್ದಳು.

ಕಳೆದ 6 ತಿಂಗಳ ಹಿಂದೆ ಅಲಂಗೀರ್‌ ದೆಹಲಿಗೆ ಬಂದಿದ್ದಾಗ ಬಂಗಾಳ ಮೂಲದ ಮಹಿಳೆ ಅಮಿನಾಳನ್ನ ಮದುವೆಯಾಗಿದ್ದ.

Leave a Reply

Your email address will not be published. Required fields are marked *

error: Content is protected !!