ಸುಳ್ಯ: ಎರಡು ಖಾಸಗಿ ಬಸ್ ಗಳನ್ನು ಸೀಝ್ ಮಾಡಿದ ಆರ್ ಟಿ ಒ ಅಧಿಕಾರಿಗಳು
ಸುಳ್ಯ; ಅತೀ ಹಳೆಯ ಪರ್ಮಿಟ್ ಹೊಂದಿದ್ದ ಎರಡು ಖಾಸಗಿ ಬಸ್ ಗಳನ್ನು ಆರ್ ಟಿ ಓ ಅಧಿಕಾರಿಗಳು ಸೀಝ್ ಮಾಡಿದ ಘಟನೆ ಸುಳ್ಯದಲ್ಲಿ ನಡೆದಿದೆ.
ಸುಳ್ಯ – ಮಂಡೆಕೋಲು ಮಾರ್ಗದಲ್ಲಿ ಸಂಚರಿಸುತ್ತಿದ್ದ ಎರಡು ಬಸ್ ಗಳನ್ನು ಸೋಮವಾರ ಮುಂಜಾನೆ ಸಾರಿಗೆ ಇಲಾಖೆ ಇನ್ಸ್ ಪೆಕ್ಟರ್ ಇಸ್ಮಾನ್ ನೇತೃತ್ವದಲ್ಲಿ ಪುತ್ತೂರು ಆರ್ ಟಿ ಓ ಅಧಿಕಾರಿಗಳ ತಂಡ ಸೀಝ್ ಮಾಡಿದೆ.
ಹಿಂದಿನಿಂದಲೂ ಅಜ್ಜಾವರ ಮಂಡೆಕೋಲು – ಅಡೂರು ಗೆ ತೆರಳುತ್ತಿದ್ದ ಕೆಎ-20-ಸಿ-1809 ಖಾಸಗಿ ಬಸ್ ಅನಿಲ್ ಛಾತ್ರ ಎಂಬುವವರ ಹೆಸರಿನಲ್ಲಿದ್ದು ಈ ಬಸ್ಸು ಒಂದು ಲಕ್ಷದ ಹನ್ನೆರಡು ಸಾವಿರ ಟ್ಯಾಕ್ಸ್ ಉಳಿಸಿಕೊಂಡಿದೆ.
ಅಲ್ಲದೇ ಕೆಎ-19-ಸಿ-0329 ಎಂಬ ಸಂಖ್ಯೆಯ ಇನ್ನೊಂದು ಬಸ್ ಸುಮಾರು ಮೂವತ್ತೋಂಬತ್ತು ಸಾವಿರ ಟ್ಯಾಕ್ಸ್ ಉಳಿಸಿಕೊಂಡಿದೆ.
ಇವುಗಳಲ್ಲಿ ಒಂದು ಡಿಸೆಂಬರ್ ತಿಂಗಳಿನಲ್ಲಿ ಹಾಗೂ ಇನ್ನೊಂದು ಜನವರಿ ತಿಂಗಳಿನಲ್ಲಿ ಅವಧಿ ಮುಗಿದಿದ್ದರೂ ನವೀಕರಣ ಮಾಡದೇ ಬಸ್ ಗಗಳನ್ನು ಓಡಿಸುತ್ತಿರುವ ಕುರಿತು ಆರ್ ಟಿ ಓ ಅಧಿಕಾರಿಗಳಿಗೆ ದೂರು ಕೇಳಿಬಂದಿತ್ತು ಈ ಹಿನ್ನೆಲೆ ಬಸ್ ಗಳನ್ನು ಸೀಝ್ ಮಾಡಿದ್ದಾರೆ.
ಸೀಝ್ ಆಗಿರುವ ಬಸ್ಸುಗಳು ಚೆನ್ನಕೇಶವ ದೇವಾಲಯದ ಬಳಿಯಲ್ಲಿ ಪೋಲೀಸ್ ಸುಪರ್ದಿಗೆ ನೀಡಲಾಗಿದೆ.
ಈ ಕುರಿತಂತೆ ಕಾನೂನು ರೀತಿಯಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಹಾಗೂ ಪರವಾನಿಗೆ ಹೊಂದಿದ ಮಾಲಕರು ನೋಟಿಸ್ ಗೆ ಉತ್ತರ ಸಲ್ಲಿಸಿದ ಬಳಿಕ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎನ್ನಲಾಗಿದೆ.




