July 10, 2026

ಬಂಟ್ವಾಳ |ಭಾರೀ ಮಳೆಗಾಳಿಗೆ ಓಮ್ನಿ ಕಾರಿನ ಮೇಲೆ ಬಿದ್ದ ಮರ: ವಾಹನ ಸಂಪೂರ್ಣ ಜಖಂ.

0
image_editor_output_image322836525-1688633198479.jpg

ಬಂಟ್ವಾಳ : ಕರಾವಳಿಯಲ್ಲಿ ಭಾರಿ ಗಾಳಿ ಮಳೆ ನಾಲ್ಕನೇ ದಿನವೂ ಮುಂದುವರೆದಿದ್ದು ದಕ್ಷಿಣ ಕನ್ನಡದ ಹಲವೆಡೆ ಅಪಾರ ನಷ್ಟ ಉಂಟು ಮಾಡಿದೆ.

ಬಂಟ್ವಾಳದ ಮಾಣಿಯ ಕೊಡಾಜೆಯಲ್ಲಿ ಭಾರೀ ಮಳೆಗಾಳಿಗೆ ಮನೆ ಮುಂಭಾಗ ನಿಲ್ಲಿಸಿದ್ದ ಓಮ್ನಿ ಕಾರಿನ ಮೇಲೆ ಮರ ಬಿದ್ದ ವಾಹನ ಸಂಪೂರ್ಣವಾಗಿ ಜಖಂಗೊಂಡಿದೆ.‌

ಕೊಡಾಜೆ ನಿವಾಸಿ ಇಸ್ಮಾಯಿಲ್ ಎಂಬವರಿಗೆ ಸೇರಿದ ಓಮ್ನಿ ಕಾರನ್ನು ತನ್ನ ಮನೆಯ ಸಮೀಪ ನಿಲ್ಲಿಸಿದ್ದರು.

ಮಳೆ ಗಾಳಿಗೆ ಬೃಹತಾಕಾರದ ಮಾವಿನ ಮರ ಅದರ ಮೇಲೆ ಉರುಳಿ ಬಿದ್ದಿದೆ.‌ ಇದರಿಂದ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!