March 24, 2026

ಹುಡುಗಿಯರನ್ನು ನಿಭಾಯಿಸಲು, ಶೋಕಿಗಾಗಿ ಐಷಾರಾಮಿ ಬೈಕ್‌ಗಳ ಕಳವು: ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ

0
image_editor_output_image-1841832016-1688632882716.jpg

ಯಾದಗಿರಿ: ಹುಡುಗಿಯರನ್ನು ನಿಭಾಯಿಸಲು ಮತ್ತು ಶೋಕಿಗಾಗಿ ಐಷಾರಾಮಿ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಯಾದಗಿರಿ ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯಲ್ಲಿ ಇತ್ತೀಚಿಗೆ ಬೈಕ್ ಕಳ್ಳತನಗಳು ಹೆಚ್ಚಾಗಿ ನಡೆಯುತ್ತಿವೆ. ಯಾದಗಿರಿ, ಶಹಾಪುರ ನಗರ ಸೇರಿದಂತೆ ಜಿಲ್ಲೆಯ ನಾನಾ ಭಾಗದಲ್ಲಿ ಸಾಕಷ್ಟು ಬೈಕ್ ಕಳ್ಳತನವಾಗಿರುವ ವರದಿಯಾಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಕೆಂಭಾವಿ ಪೊಲೀಸರು ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿದ್ದಾರೆ.

ಕೆಂಭಾವಿ ಠಾಣೆಯ ಪಿಎಸ್‌ಐ ಕೆಂಭಾವಿ ಪಟ್ಟಣದಲ್ಲಿ ಗಸ್ತು ನಡೆಸುತ್ತಿದ್ದರು. ಇದೇ ವೇಳೆ ಪಟ್ಟಣದಲ್ಲಿ ಇಬ್ಬರು ಯವಕರು ಬೈಕ್ ಜೊತೆ ಅನುಮಾನಸ್ಪದ ರೀತಿಯಲ್ಲಿ ಕಂಡಿದ್ದಾರೆ. ಕೂಡಲೇ ಅವರಿಬ್ಬರನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!