February 3, 2026

ಮದುವೆಯಾಗುವುದಾಗಿ ನಂಬಿಸಿ ಯುವತಿಯ ನಿರಂತರ ಅತ್ಯಾಚಾರ: ಸ್ನೇಹಿತರ ಜೊತೆ ಸೇರಿ ಪ್ರಿಯತಮೆಯ ಹತ್ಯೆ

0
image_editor_output_image1926480226-1688622430562.jpg

ಲಕ್ನೋ: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದ ಗರ್ಭಿಣಿಯೊಬ್ಬಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂರು ದಿನಗಳ ಬಳಿಕ ಪ್ರಿಯಕರ ಹಾಗೂ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

2015 ರಲ್ಲಿ ರಾಂಬಿರಿ ಎನ್ನುವಾಕೆ ವಿನೋದ್‌ ಎನ್ನುವವರನ್ನು ಮದುವೆಯಾಗಿದ್ದರು. ವರ್ಷದ ಬಳಿಕ ದಂಪತಿ ವಿಚ್ಚೇದನ ಪಡೆದು ದೂರವಾಗಿದೆ.

ಇದಾದ ಬಳಿಕ ರಾಂಬಿರಿ ತನ್ನ ತಂದೆಯ ಮನೆಯಲ್ಲಿ ವಾಸವಾಗಿದ್ದಳು. ಅಲ್ಲಿ ಅವಳು ಆದೇಶ್‌ ಎನ್ನುವ ಯುವಕನ ಪರಿಚಯವಾಗಿದೆ. ಇಬ್ಬರ ನಡುವಿನ ಆತ್ಮೀಯತೆ ಪ್ರೀತಿಗೆ ತಿರುಗಿದೆ. ಈ ವೇಳೆ ರಾಂಬಿರಿ ಗರ್ಭಿಣಿಯಾಗಿದ್ದಾಳೆ.

ರಾಂಬಿರಿ ತನ್ನನು ಮದುವೆಯಾಗುವಂತೆ ಮತ್ತೆ ಮತ್ತೆ ಆದೇಶ್‌ ಬಳಿ ಒತ್ತಾಯಿಸುತ್ತಿದ್ದಳು. ಇದರಿಂದ ಆದೇಶ್‌ ಸ್ನೇಹಿತರೊಂದಿಗೆ ಸೇರಿ ರಾಂಬಿರಿಯನ್ನು ಕೊಲೆಗೈಯುವ ಸಂಚನ್ನು ರೂಪಿಸಿದ್ದ ಎಂದು ಪ್ರಕರಣದ ಬಗ್ಗೆ ಪೊಲೀಸರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!