ವಿಟ್ಲ: ಅಟೋ ಚಾಲಕರ ಮತ್ತು ಮಾಲಕರ ಸೌಹಾರ್ದ ಸಂಘದ ನವೀಕೃತ ಲೋಗೋ ಬಿಡುಗಡೆ
ವಿಟ್ಲ ;ಅಟೋ ಚಾಲಕರ ಮತ್ತು ಮಾಲಕರ ಸೌಹಾರ್ದ ಸಂಘ (ರಿ.) RCMS ವಿಟ್ಲ ಇದರ ನವೀಕೃತ ಲೋಗೋ ಬಿಡುಗಡೆ ಕಾರ್ಯಕ್ರಮವು ವಿಟ್ಲ ಹೋಟೆಲ್ ಪಂಚಮಿಯ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಹರಿಣಾಕ್ಷ ಮಾರುಗುರಿ ಇವರ ಅದ್ಯಕ್ಷತೆಯಲ್ಲಿ ಜರಗಿತು.
ಸಂಘದ ನೂತನ ಲೋಗೋವನ್ನು ಸಂಘದ ಗೌರವಾಧ್ಯಕ್ಷ ಸಂದೇಶ್ ಶೆಟ್ಟಿ ಬಿಕ್ನಾಜೆ ಇವರು ಹಿರಿಯ ಚಾಲಕ ಜನಾರ್ದನ ಪೂಜಾರಿ ಅನಿಲಕಟ್ಟೆ ಇವರಿಗೆ ನೀಡುವುದರ ಮೂಲಕ ಬಿಡುಗಡೆ ಮಾಡಿದರು.
ಉಪಾಧ್ಯಕ್ಷಮಾಧವ ಕಡಂಬು , ಜೊತೆ ಕಾರ್ಯದರ್ಶಿ ಅಶ್ರಫ್ ಬೆದ್ರಕಾಡು , ಮುಫ್ತಿ ಸಯ್ಯದ್ ಪರ್ತಿಪ್ಪಾಡಿ, ಅಶ್ರಫ್ ಅನಿಲಕಟ್ಟೆ, ಸುಪ್ರಿಯನ್ ಡಿಸೋಜ,ದಿನೇಶ್ ಗೌಡ ಕುಕ್ಕಿಲ,ವಸಂತ ಅನಿಲಕಟ್ಟೆ, ಸಿದ್ದೀಕ್ ಅನಿಲಕಟ್ಟೆ,ಯಹ್ಯಾ ಟಿಪ್ಪುನಗರ, ರಾಜೇಶ್ ಶೆಟ್ಟಿ, ಯೂಸುಫ್ ಪಿ, ಅಬ್ದುಲ್ ಕುಂಞ ಕೆ, ಇಲ್ಯಾಸ್ ಕೆ, ರವಿ ನೆತ್ರೆಕೆರೆ, ಸಿದ್ದೀಕ್ ಪರ್ತಿಪ್ಪಾಡಿ, ಅಲಿ ಪಿ, ಪೂವಪ್ಪ ಕೆ,ಕರೀಂ ಕೆ, ರಝ್ಹಾಕ್ ಕೆ,ಜೋಯಿಸನ್ ಲೋಬೊ, ಸೇರಿದಂತೆ ಸುಮಾರು 30ಕ್ಕೂ ಮಿಕ್ಕ ಚಾಲಕರು ಬಾಗವಹಿಸಿದ ಸಭೆಯಲ್ಲಿ ಪ್ರದಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಟಿ ಎಂ ಸ್ವಾಗತಿಸಿ ಕೋಶಾಧಿಕಾರಿ ನಾಗೇಶ್ ಪೂರ್ಲಪ್ಪಾಡಿ ವಂದಿಸಿದರು




