February 4, 2026

ಮೇಲ್ಸೇತುವೆಯ ಮೇಲಿಂದ ರೈಲ್ವೇ ಹಳಿಗೆ ಉರುಳಿದ ಕಾರು: ಐದು ಮಂದಿ ಗಂಭೀರ

0
image_editor_output_image-1614104683-1688299902237

ಮುಂಬೈ: ಮೇಲ್ಸೇತುವೆಯ ಮೇಲಿಂದ ಕಾರೊಂದು ರೈಲ್ವೇ ಹಳಿಗೆ ಬಿದ್ದ ಪರಿಣಾಮ ಐವರು ಗಂಭೀರ ಗಾಯಗೊಂಡಿರುವ ಘಟನೆ ಜು.2ರಂದು ಮಹಾರಾಷ್ಟ್ರದಲ್ಲಿ  ನಡೆದಿದೆ.

ಮುಂಬೈ: ಮೇಲ್ಸೇತುವೆಯ ಮೇಲಿಂದ ಕಾರೊಂದು ರೈಲ್ವೇ ಹಳಿಗೆ ಬಿದ್ದ ಪರಿಣಾಮ ಐವರು ಗಂಭೀರ ಗಾಯಗೊಂಡಿರುವ ಘಟನೆ ಜು.2ರಂದು ಮಹಾರಾಷ್ಟ್ರದಲ್ಲಿ ನಡೆದಿದೆ.

ನಾಗ್ಪುರದ ಬೋರ್ಖೆಡಿ ಮೇಲ್ಸೇತುವೆಯ ಮೇಲೆ ಕಾರು ಚಲಿಸುತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಇದರ ಪರಿಣಾಮ 5 ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ರಭಸಕ್ಕೆ ಕಾರು ಜಖಂಗೊಂಡಿದೆ.

ಕಾರು ಅತಿ ವೇಗದಲ್ಲಿ  ಚಲಾಯಿಸಿದ ಪರಿಣಾಮ ಈ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಸ್ಥಳಕ್ಕೆ ಬುಟಿಬೋರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತಕ್ಕೆ ನಿಖರ ಕಾರಣ ತನಿಖೆ ಬಳಿಕ ತಿಳಿಯಲಿದೆ.
ಸದ್ಯ ಗಾಯಾಳುಗಳು ಚೇತರಿಸಿಕೊಂಡ ಬಳಿಕ ಅವರಿಂದ ಮಾಹಿತಿ ಪಡೆಯಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!