October 19, 2026

ಟೆಕ್ಕಿ ದಂಪತಿ ಅಸ್ಲಂ, ಫರ್ಹಾನಾ ನಿಗೂಢ ಸಾವು

0
image_editor_output_image744785022-1792381801038

ಚಂಡೀಗಢ: ಗುರುಗ್ರಾಮ್‌ನಲ್ಲಿ  ಟೆಕ್ಕಿ ದಂಪತಿ ನಿಗೂಢ ಸಾವನ್ನಪ್ಪಿದ್ದಾರೆ. ಪತ್ನಿಯನ್ನು ಕೊಂದು ಪತಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಕೇರಳ ಮೂಲದ ಮೊಹಮ್ಮದ್ ಅಸ್ಲಂ (30), ಫರ್ಹಾನಾ (28) ಮೃತ ದಂಪತಿ. ಗುರುಗ್ರಾಮ್‌ನ ಸೆಕ್ಟರ್ 68ರ M3M ಮರೀನಾ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಘಟನೆ ನಡೆದಿದೆ.

ಫರ್ಹಾನಾ ಕುತ್ತಿಗೆಯಲ್ಲಿ ಗಾಯದ ಗುರುತು, ನೇಣುಬಿಗಿದ ಸ್ಥಿತಿಯಲ್ಲಿ ಅಸ್ಲಂ ಶವ ಪತ್ತೆಯಾಗಿದೆ. ಘಟನೆಗೂ ಮುನ್ನ ಅಸ್ಲಂ ತಾನು ಕೆಲಸ ಮಾಡುತ್ತಿದ್ದ ಕಚೇರಿಗೆ ಇ-ಮೇಲ್ ಕಳುಹಿಸಿದ್ದ. ‘ನಾವು ಈ ಜಗತ್ತನ್ನು ತೊರೆಯುತ್ತಿದ್ದೇವೆ’ ಎಂದು ಸಂದೇಶದಲ್ಲಿ ತಿಳಿಸಿದ್ದ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!