March 13, 2026

ಕಾಸರಗೋಡು: ಸ್ನಾನಕ್ಕೆಂದು ಕೆರೆಗೆ ಹೋದ ಸಹೋದರರಿಬ್ಬರು ನೀರಿನಲ್ಲಿ ಮುಳುಗಿ ಮೃತ್ಯು

0
IMG-20230701-WA0034.jpg

ಕಾಸರಗೋಡು: ಸ್ನಾನಕ್ಕೆಂದು ಕೆರೆಗೆ ಹೋದ ಸಹೋದರರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಕೊಪ್ಪಳ ಎಂಬಲ್ಲಿ ಶನಿವಾರ ಮಧ್ಯಾಹ್ನ ವರದಿಯಾಗಿದೆ.

ಮಂಜೇಶ್ವರ ಮಜಿ ಬೈಲ್ ನಿವಾಸಿ ಖಾದರ್ ಮತ್ತು ಮೊಗ್ರಾಲ್ ಕೊಪ್ಪಳ ಮೂಲದ ನಸೀಮಾ ದಂಪತಿ ಮಕ್ಕಳಾದ ನವಾಝ್ ರಹ್ಮಾನ್(22) ಮತ್ತು ನಾದಿಲ್ (17) ಮೃತಪಟ್ಟ ಸಹೋದರರು.

ಸ್ಥಳೀಯರು ಇಬ್ಬರನ್ನು ಮೇಲಕ್ಕೆತ್ತಿ ಅಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ.ಈದ್ ಆಚರಣೆಗೆಂದು ಅಜ್ಜಿ ಮನೆಗೆ ಬಂದಿದ್ದ ಸಹೋದರರಿಬ್ಬರು ಸ್ನಾನ ಮಾಡಲು ಕೆರೆಗೆ ಹೋಗಿದ್ದು, ದುರಂತ ಸಂಭವಿಸಿದೆ.

ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಮೃತ ದೇಹವನ್ನು ಮಂಗಲ್ಪಾಡಿ ಯಲ್ಲಿರುವ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ

Leave a Reply

Your email address will not be published. Required fields are marked *

error: Content is protected !!