ಮಧ್ಯಪ್ರದೇಶ: ಮೊರೆನಾದಲ್ಲಿ ಉಧಮ್‌ಪುರ-ದುರ್ಗ ಎಕ್ಸ್‌ಪ್ರೆಸ್‌ಗೆ ಬೆಂಕಿ:
2 ಬೋಗಿಗಳು ಸುಟ್ಟು ಕರಕಲು
ಮಧ್ಯಪ್ರದೇಶ: ಮೊರೆನಾ ಮತ್ತು ಧೋಲ್‌ಪುರ ನಡುವಿನ ಹೇತಾಂಪುರ ನಿಲ್ದಾಣದ ಬಳಿ ಶುಕ್ರವಾರ ಮಧ್ಯಾಹ್ನ ಉಧಮ್‌ಪುರ ಎಕ್ಸ್‌ಪ್ರೆಸ್ ರೈಲಿನ ಎರಡು ಎಸಿ ಕೋಚ್‌ಗಳಿಗೆ ಬೆಂಕಿ ಕಾಣಿಸಿಕೊಂಡಿದೆ. ಸಮಯಕ್ಕೆ ಸರಿಯಾಗಿ ಬೆಂಕಿಯನ್ನು ಹತೋಟಿಗೆ ತಂದಿದ್ದರಿಂದ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ.
ಮಧ್ಯಪ್ರದೇಶದ ಹೇತಾಂಪುರ ರೈಲು ನಿಲ್ದಾಣದಿಂದ ರೈಲು ಹೊರಟ ಬಳಿಕ ಈ ಘಟನೆ ನಡೆದಿದೆ. ರೈಲು ಉಧಂಪುರದಿಂದ ದುರ್ಗ್‌ಗೆ ತೆರಳುತ್ತಿತ್ತು. ಮಧ್ಯಾಹ್ನ 3.30ರ ಸುಮಾರಿಗೆ ಎ1 ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ರೈಲು ಹೇತಾಂಪುರ ನಿಲ್ದಾಣದ ಬಳಿ ಇದ್ದ ಕಾರಣ ಎ2 ಕೋಚ್‌ಗೆ ವ್ಯಾಪಿಸಿದೆ. ತಕ್ಷಣವೇ ರೈಲನ್ನು ನಿಲ್ಲಿಸಲಾಯಿತು.
ಪ್ರಯಾಣಿಕರು ಕಿಟಕಿ ಗಾಜುಗಳನ್ನು ಒಡೆದು ಹೊರಗೆ ಬಂದಿದ್ದಾರೆ ಎಂದು ಸ್ಥಳೀಯ ಸರಾಯಿಚೋಳ ಪೊಲೀಸ್ ಠಾಣೆ ಪ್ರಭಾರಿ ರಿಷಿಕೇಶ್ ಶರ್ಮಾ ತಿಳಿಸಿದ್ದಾರೆ.
“ಉದಮ್‌ಪುರ-ದುರ್ಗ್ ಎಕ್ಸ್‌ಪ್ರೆಸ್‌ನ A1 ಮತ್ತು A2 ಕೋಚ್‌ಗಳು ಹೇತಾಂಪುರ ರೈಲು ನಿಲ್ದಾಣದಿಂದ ನಿರ್ಗಮಿಸಿದ ನಂತರ ಅಪರಿಚಿತ ಕಾರಣಗಳಿಂದ ಬೆಂಕಿ ಹೊತ್ತುಕೊಂಡಿದೆ. ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಮತ್ತು ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ” ಎಂದು ಶರ್ಮಾ ಹೇಳಿದರು.
ರೈಲ್ವೆ ಅಧಿಕಾರಿಗಳ ಪ್ರಕಾರ ಎರಡು ಬೋಗಿಗಳಲ್ಲಿ 70ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಎರಡು ಬೋಗಿಗಳಿಂದ ಹೊಗೆ ಮತ್ತೊಂದು ಎಸಿ ಬೋಗಿ ಮತ್ತು ಜನರೇಟರ್ ವ್ಯಾನ್‌ಗೆ ಪ್ರವೇಶಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. A1 ಮತ್ತು A2 ಕೋಚ್‌ಗಳು ಮತ್ತು ಪ್ರಯಾಣಿಕರ ಲಗೇಜ್‌ಗಳು ಹಾನಿಗೊಳಗಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಾನಿಗೊಳಗಾದ ಕೋಚ್‌ಗಳನ್ನು ರೈಲಿನಿಂದ ಬೇರ್ಪಡಿಸಲಾಗಿದೆ. ಸಮಯಕ್ಕೆ ಸರಿಯಾಗಿ ಬೆಂಕಿ ನಂದಿಸುವಲ್ಲಿ ಸ್ಥಳೀಯರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.





