June 30, 2026

ಸೆಮಿ ಟ್ರೈಲರ್ ಟ್ರಕ್, ಬಸ್ ಮಧ್ಯೆ ಢಿಕ್ಕಿ: 15 ಜನರು ಸಾವು, 10 ಮಂದಿಗೂ ಹೆಚ್ಚು ಗಾಯ

0
image_editor_output_image-871601784-1686889160429.jpg

ಕೆನಡಾ: ಕೆನಡಾದ ಮ್ಯಾನಿಟೋಬಾದ ಕಾರ್ಬೆರಿ ಪಟ್ಟಣದ ಬಳಿ ಸೆಮಿ ಟ್ರೈಲರ್ ಟ್ರಕ್ ಮತ್ತು ಹಿರಿಯ ನಾಗರಿಕರು ಪ್ರಯಾಣಿಸುತ್ತಿದ್ದ ಬಸ್ ಮಧ್ಯೆ ಡಿಕ್ಕಿ ಸಂಭವಿಸಿ ಕನಿಷ್ಠ 15 ಜನರು ಸಾವನ್ನಪ್ಪಿದ್ದು, 10 ಮಂದಿಗೂ ಹೆಚ್ಚು ಗಾಯಗೊಂಡಿರುವುದಾಗಿ ವರದಿಯಾಗಿದೆ.

ಅಪಘಾತದಲ್ಲಿ 15 ಜನರು ಸಾವನ್ನಪ್ಪಿದ್ದಾರೆ ಎಂದು ಕೆನಡಾದ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇನ್ನೂ 10 ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ರಸ್ತೆ ಅಪಘಾತವು ಕಾರ್ಬೆರಿಯ ಉತ್ತರದ ಟ್ರಾನ್ಸ್-ಕೆನಡಾ ಹೆದ್ದಾರಿಯಲ್ಲಿ ಸಂಭವಿಸಿದೆ. ರಸ್ತೆ ಅಪಘಾತದ ನಂತರ ತುರ್ತು ವಾಹನಗಳು ಮತ್ತು ಎರಡು ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿದವು. ಈ ಅವಘಡದಲ್ಲಿ ಬೆಂಕಿ ಹೊತ್ತಿಕೊಂಡಿದೆ.

Leave a Reply

Your email address will not be published. Required fields are marked *

You may have missed

error: Content is protected !!