February 3, 2026

ಮುಡಿಪು ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಗ್ಯಾರೆಂಟಿ ಯೋಜನೆ ಗಳ ಮಾಹಿತಿ ಕಾರ್ಯಕ್ರಮ

0
image_editor_output_image940076463-1686848630465

ಮುಡಿಪು: ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರಕಾರ ಚುನಾವಣೆ ಪೂರ್ವದಲ್ಲಿ ನೀಡಲಾದ 5 ಗ್ಯಾರಂಟಿ ಭರವಸೆ ಯನ್ನು ಮತದಾನ ದ ಶಾಯಿ ಬೆರಳಿಂದ ಮಾಸುವ ಮುನ್ನವೇ ಅನುಷ್ಠಾನ ಮಾಡುತ್ತಿರುವುದು ದೇಶದ ಇತಿಹಾಸ ದಲ್ಲಿ ಯಾರೂ ಮಾಡದ ಸಾಧನೆ ಯಾಗಿದೆ ಎಂದು ಪಂಚಾಯತ್ ರಾಜ್ ಸಂಘಟನೆ ಯ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ರವರು ಹೇಳಿದರು,

ಅವರು ಮುಡಿಪು ವಿನಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ 5 ಗ್ಯಾರಂಟಿ ಯೋಜನೆ ಗಳ ಮಾಹಿತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಭಾಗವಹಿಸಿ ಮಾತನಾಡಿ ಗೃಹಲಕ್ಷ್ಮಿ, ಗ್ರಹಜ್ಯೋತಿ, ಶಕ್ತಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆ ಗಳ ನೋಂದಾವನೆ ಶೀಘ್ರದಲ್ಲಿ ಆರಂಭ ವಾಗಳಿದ್ದು ಪಕ್ಷದ ಈ ಕಾರ್ಯಕ್ರಮ ವನ್ನು ಕಾರ್ಯಕರ್ತರು ಜಿಲ್ಲಾ ಕಾಂಗ್ರೆಸ್ ಆದೇಶದಂತೆ ವಲಯ ಮಟ್ಟದಲ್ಲಿ ಬ್ಲಾಕ್ ನ ಮಾರ್ಗದರ್ಶನ ದಲ್ಲಿ ಇಂದಿರಾ ಸೇವಾ ಕೇಂದ್ರ ಎಂಬ ಹೆಸರಲ್ಲಿ ಮತದಾರ ರಿಗೆ ಉಚಿತ ವಾಗಿ ನೋಂದಾಯಿಸಿ ಕೊಟ್ಟು ಮುಂದಿನ ದಿನಗಳಲ್ಲಿ ನುಡಿದಂತೆ ನಡೆದ ನಮ್ಮ ಪಕ್ಷಕ್ಕೆ ಇದರಿಂದ ಲಾಭ ವಾಗುವಂತೆ ಜಾಗ್ರತೆ ವಹಿಸಬೇಕೆಂದು ಕರೆ ನೀಡಿದರು
ಮುಖ್ಯ ಅತಿಥಿ ಯಾಗಿ ಭಾಗವಹಿಸಿ ದ ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಗಟ್ಟಿ ಯವರು ಮಾತನಾಡಿ ಮಹಿಳಾ ಫಲಾನುಭವಿಗಳೇ ಹೆಚ್ಚಾಗಿ ನೋಂದಾಯಿಸುವ ಈ ಕಾರ್ಯಕ್ರಮ ಮಹಿಳಾ ಸಬಳೀಕರಣ ಮತ್ತು ಸ್ವಾಭಿಮಾನ ದ ಬದುಕಿಗೆ ಪೂರಕ ವಾಗಿದೆ ಎಂದರು ಅಧ್ಯಕ್ಷ ತೆ ವಹಿಸಿ ಮಾತನಾಡಿದ ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ ರವರು ಈ ಕಾರ್ಯಕ್ರಮ ಯಶಸ್ವಿ ಯಾಗಲು ಎಲ್ಲರೂ ಸಹಕರಿಸಬೇಕೆಂದರು , ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ಹೈದರ್ ಕೈರಂಗಳ ಸ್ವಾಗತಿಸಿದರು ವೇದಿಕೆಯಲ್ಲಿ ಪದ್ಮನಾಭ ನರಿಂಗಾನ ಮತ್ತು ಕಿಸಾನ್ ಘಟಕ ದ ಅಧ್ಯಕ್ಷ ಅರುಣ್ ಉಪಸ್ಥಿತರಿದ್ದರು ಪಂಚಾಯತ್ ಪ್ರತಿನಿಧಿಗಳು ಬ್ಲಾಕ್ ಪದಾಧಿಕಾರಿಗಳು, ವಲಯ ಅಧ್ಯಕ್ಷರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!