ಬ್ರಹ್ಮರಕೂಟ್ಲು ಟೋಲ್ ಗೇಟ್ ವಿರುದ್ಧ ಆಗಸ್ಟ್ 18ರಂದು SDPIಯಿಂದ ಟೋಲ್ to ಡಿಸಿ ಕಚೇರಿ ಪಾದಯಾತ್ರೆ”
ಮಂಗಳೂರು: ಬ್ರಹ್ಮರಕೂಟ್ಲುವಿನಲ್ಲಿ ಕಾರ್ಯಾಚರಿಸುತ್ತಿರುವ ಅಕ್ರಮ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಎಸ್‌ಡಿಪಿಐ ವತಿಯಿಂದ ಆಗಸ್ಟ್ 18ಕ್ಕೆ ಡಿಸಿ ಕಚೇರಿ ಚಲೋ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಹೇಳಿದ್ದಾರೆ.
ಈ ಬಗ್ಗೆ ಮಂಗಳೂರಿನಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 2005ರಲ್ಲಿ ಸುರತ್ಕಲ್-ಬಿಸಿ ರೋಡ್ ಚತುಷ್ಪತ ಹೆದ್ದಾರಿ ಕಾಮಗಾರಿ ಆರಂಭವಾಗಿತ್ತು. ನವಯುಗ ಕನ್ಸ್ಟ್ರಕ್ಷನ್ 8 ವರ್ಷ ಕಾಮಗಾರಿ ನಡೆಸಿತ್ತು. ಕಾಮಗಾರಿ ಸಂಪೂರ್ಣಗೊಳ್ಳುವ ಮುಂಚೆ ಟೋಲ್ ಸಂಗ್ರಹ ಆರಂಭ ಮಾಡಲಾಗಿತ್ತು. ಬಳಿಕ 13 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಟೋಲ್ ಆರಂಭವಾದಾಗಲೇ ನಾವು ಹೋರಾಟ ಆರಂಭಿಸಿದ್ದೆವು
ಎಸ್‌ಡಿಪಿಐ ನಿರಂತರ ಹೋರಾಟ ಮಾಡಿದರೂ ಅದಕ್ಕೆ ವ್ಯವಸ್ಥೆ ಸೊಪ್ಪು ಹಾಕಿಲ್ಲ ಎಂದು ದೂರಿದರು.
ಬ್ರಹ್ಮರಕೂಟ್ಲು ಟೋಲ್ ಪ್ಲಾಜ್ಹಾದಲ್ಲಿ ದಿನಂಪ್ರತಿ ಗಲಾಟೆ ನಡೆಯುತ್ತಿದೆ. ಕಾಮಗಾರಿಯ ವೆಚ್ವಕ್ಕಿಂತ ತುಂಬಾ ಪಟ್ಟು ಟೋಲ್ ಈಗಾಗಲೇ ಸಂಗ್ರಹವಾಗಿದೆ ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ ಲೆಕ್ಕ ನೀಡುತ್ತಿಲ್ಲ. ಜನಪ್ರತಿನಿಧಿಗಳು ಮಾತಾಡುತ್ತಿಲ್ಲ. ಅವರು ಕೋಮವಾದ ಮಾಡುತ್ತಾ ದ್ವೇಷ ಭಾಷಣ ಮಾಡುತ್ತಾ ಅಕ್ರಮ ವ್ಯವಹಾರಗಳಿಗೆ ಬೆಂಗಾವಲಾಗಿದ್ದಾರೆ. ಈಗಿನ ಸಂಸದರು ಹೆದ್ದಾರಿ ಸಚಿವರಿಗೆ ಮನವಿ ಮಾಡಿಲ್ಲ. ಲೋಕಸಭೆಯಲ್ಲಿ ಮಾತಾಡಿಲ್ಲ. ಎಸ್‌ಡಿಪಿಐ ವಿರುದ್ಧ ಮಾತಾಡುವ ಸಂಸದರು ಅಕ್ರಮ ಟೋಲ್ ಬಗ್ಗೆ ಮೌನವಾಗಿದ್ದಾರೆ ಎಂದು ಹೇಳಿದರು.
ಈ ಟೋಲ್ ಗೇಟ್ ನಲ್ಲಿ ದಿನಕ್ಕೆ ಲಕ್ಷ ಲಕ್ಷ ರೂಪಾಯಿ ಸಂಗ್ರಹವಾಗುತ್ತದೆ, ಇಷ್ಟು ವರ್ಷಗಳಲ್ಲಿ ಸಾವಿರಾರು ಕೋಟಿ ಸಂಗ್ರಹವಾಗಿದೆ.
ಇದು ಹಗಲುದರೋಡೆ. ಕೇರಳದ ಕುಂಬಳೆಯಲ್ಲಿ ನಿರ್ಮಾಣವಾದ ಹೊಸ ಟೋಲ್ ಜನಾಕ್ರೋಶಕ್ಕೆ ಮಣಿದು ತೆರವಾಗಿದೆ, ಅಲ್ಲಿ ಸಾಧ್ಯವಾಗಿದ್ದು ದಕ್ಷಿಣ ಕನ್ನಡದಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ.
ಅಕ್ರಮ ಟೋಲ್ ಸಂಗ್ರಹದಲ್ಲಿ ಎಷ್ಟು ಹಣ ಶಾಸಕರು ಸಂಸದರಿಗೆ ಹೋಗುತ್ತಿದೆ ಎಂದು ನಮಗೆ ತಿಳಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟೋಲ್ ಸಂಗ್ರಹಕ್ಕೆ ಹಲವು ನಿಯಮಗಳಿವೆ, ಆ ಯಾವ ನಿಯಮವೂ ಬ್ರಹ್ಮಕೋಟ್ಲುಟೋಲ್ ಮತ್ತು ಹೆದ್ದಾರಿಯಲ್ಲಿ ಪಾಲನೆಯಾಗುತ್ತಿಲ್ಲ ಸಮರ್ಪಕ ರಸ್ತೆ ಇಲ್ಲದಿದ್ದರೂ ಅಕ್ರಮವಾಗಿ ಟೋಲ್ ಸಂಗ್ರಹ ಮಾಡಲಾಗುತ್ತದೆ. ಹೆದ್ದಾರಿ ಪ್ರಾಧಿಕಾರ ಮಾನಮರ್ಯಾದೆ ಬಿಟ್ಟು ಟೋಲ್ ಸಂಗ್ರಹ ಮಾಡುತ್ತಿದೆ. ಕೋಟಿ ಕೋಟಿ ಹಣ ಲೂಟಿಯಾಗಿದೆ ಎಂದರು.
ಟೋಲ್ ಕೆಂದ್ರದಲ್ಲಿ ಸಿಬ್ಬಂದಿ ಗೂಂಡಾಗಿರಿ ತೋರಿಸುತ್ತಿದ್ದಾರೆ ಬ್ರಹ್ಮರಕೋಟ್ಲು ಟೋಲ್ ಸಂಗ್ರಹ ನಿಲ್ಲಿಸದಿದ್ದರೆ ನಾವು ಬಿಡುವುದಿಲ್ಲ, ಅದನ್ನು ಜನರೇ ಕಿತ್ತುಬಿಸಾಡುತ್ತಾರೆ ಕೇರಳದ ಜನರು ಹೊಸ ಟೋಲನ್ನು ಹೋರಾಡಿ ಕಿತ್ತು ಬಿಸಾಡಿದ್ದಾರೆ. ಜನಶಕ್ತಿಯ ಮುಂದೆ ಯಾವ ಸರ್ಕಾರ ನಿಲ್ಲುವುದಿಲ್ಲ 18ನೇ ತಾರೀಖು ಬೆಳಗ್ಗೆ 10ಕ್ಕೆ ಟೋಲ್ ಕೇಂದ್ರದಿಂದ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಸಂಜೆ 4 ಗಂಟೆಗೆ ಪಾದಯಾತ್ರೆ ತಲುಪಲಿದೆ. ಅಲ್ಲಿ ಮನವಿ ಸಲ್ಲಿಕೆ ಮಾಡಲಾಗುತ್ತದೆ. ಪಾದಯಾತ್ರೆಯಲ್ಲಿ ಹೆಚ್ಚಿನ ಜನರು ಭಾಗಿಯಾಗಬೇಕು ಎಂದು ಅನ್ವರ್ ಸಾದತ್ ಮನವಿ ಮಾಡಿದ್ದಾರೆ.




