August 12, 2026

ಹೆದ್ದಾರಿ ಬಳಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿಯ ಮೃತದೇಹ ಪತ್ತೆ

0
image_editor_output_image1724009132-1686567382508.jpg

ಗೋಲ್ಪಾರಾ: ಆಘಾತಕಾರಿ ಘಟನೆಯಲ್ಲಿ ಅಸ್ಸಾಂನ ಗೋಲ್ಪಾರಾ ಜಿಲ್ಲೆಯ ಕೃಷ್ಣಾಯ್‌ನ ಸಲ್ಪಾರಾದಲ್ಲಿ ರಾಷ್ಟ್ರೀಯ ಹೆದ್ದಾರಿ 17 ರ ಬಳಿ ಬಿಜೆಪಿ ಮಹಿಳಾ ನಾಯಕಿಯ ಶವ ಭಾನುವಾರ ಪತ್ತೆಯಾಗಿದೆ. ಮೂಲಗಳ ಪ್ರಕಾರ ಮೃತದೇಹವನ್ನು ಗೋಲ್ಪಾರಾ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಜೊನಾಲಿ ನಾಥ್ ಎಂದು ಗುರುತಿಸಲಾಗಿದೆ.

ಜೋನಾಲಿ ನಾಥ್ ಅವರನ್ನು ಯೋಜಿತ ರೀತಿಯಲ್ಲಿ ಹತ್ಯೆ ಮಾಡಿ ಶವವನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಎಸೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ. ಘಟನೆಯ ಕುರಿತು ತನಿಖೆ ನಡೆಯುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಪಕ್ಷದ ಸಹೋದ್ಯೋಗಿಗಳು ಟ್ವಿಟರ್‌ನಲ್ಲಿ ಜೊನಾಲಿ ನಾಥ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಅಸ್ಸಾಂ ಬಿಜೆಪಿಯ ವಕ್ತಾರ ಜ್ಯೂರಿ ಶರ್ಮಾ ಬೊರ್ಡೊಲೊಯ್ ಅವರು ನಾಥ್ ಅವರು ತಮ್ಮ “ಅಚಲವಾದ ಬದ್ಧತೆ ಮತ್ತು ದಣಿವರಿಯದ ಪ್ರಯತ್ನಗಳಿಗೆ” ಹೆಸರುವಾಸಿಯಾಗಿದ್ದರು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!