March 25, 2026

ಬಾಲಿವುಡ್‌‌ನ ಹಿರಿಯ ನಟ ಮಂಗಲ್ ಧಿಲ್ಲೋನ್ ನಿಧನ

0
IMG-20230611-WA0010.jpg

ಚಂಡಿಗಢ: ಕ್ಯಾನ್ಸರ್‌‌ನಿಂದ ಬಳಲುತ್ತಿದ್ದ ಹಿರಿಯ ಪಂಜಾಬಿ ಮತ್ತು ಬಾಲಿವುಡ್ ನಟ, ನಿರ್ದೇಶಕ ಮಂಗಲ್ ಧಿಲ್ಲೋನ್ ಭಾನುವಾರ ನಿಧನರಾಗಿದ್ದಾರೆ.

ಮಂಗಲ್ ಧಿಲ್ಲೋನ್ ಅವರು ಲುಧಿಯಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದದು, ಭಾನುವಾರ ಅವರು ಕೊನೆಯುಸಿರೆಳೆದಿದ್ದಾರೆ ಎಂದು ನಟನ ಕುಟುಂಬಸ್ಥರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಇನ್ನು ಮಂಗಲ್ ಧಿಲ್ಲೋನ್ ಪಂಜಾಬ್‌ನ ಫರೀದ್‌ಕೋಟ್ ಜಿಲ್ಲೆಯ ಸಿಖ್ ಕುಟುಂಬದಲ್ಲಿ ಜನಿಸಿದದು, ಆರಂಭದಲ್ಲಿ ದಿಲ್ಲಿಯಲ್ಲಿ ರಂಗಭೂಮಿಯಲ್ಲಿ ಗುರುತಿಸಿಕೊಂಡ ಅವರು, 80ರ ದಶಕದಲ್ಲಿ ಮನರಂಜನೆ ಕ್ಷೇತ್ರಕ್ಕೆ ಕಾಲಿಟ್ಟು ಅನೇಕ ಸಿನಿಮಾದಲ್ಲಿ ನಟಿಸಿ, ನಿರ್ದೇಶನ ಕೂಡ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!