March 25, 2026

ಪುತ್ತೂರು: ಟ್ಯಾಂಕರ್ ಚಾಲಕನ ಮೇಲೆ ಹಲ್ಲೆ ನಡೆಸಿ 6000 ರೂ. ದರೋಡೆ: ಕೇಸು ದಾಖಲು

0
IMG-20230611-WA0014.jpg

ಪುತ್ತೂರು: ಕಾರಿನಲ್ಲಿ ತೆರಳುತ್ತಿದ್ದ ತಂಡವೊಂದು ಟ್ಯಾಂಕರ್ ಚಾಲಕನ ಮೇಲೆ ದಾಳಿ ನಡೆಸಿ 6000 ರೂಪಾಯಿ ನಗದು ದೋಚಿ ಪರಾರಿಯಾಗಿರುವ ಘಟನೆ ಉಪ್ಪಿನಂಗಡಿ ಸಮೀಪದ ದೇವಸ್ಥಾನದ ಬಳಿ ನಡೆದಿದೆ.

ಸುರತ್ಕಲ್ ನಿವಾಸಿ ಆಸ್ಕರ್ ವಿನ್ಸೆಂಟ್ ಸೋನ್ಸ್ (61) ಹಲ್ಲೆಗೊಳಗಾದ ವ್ಯಕ್ತಿ

ದರೋಡೆ ನಡೆಸಿದ ವೇಳೆ ಸೋನ್ಸ್ ಅವರ ಕೈ, ಬಾಯಿ ಮತ್ತು ಕಣ್ಣಿಗೆ ಗಾಯಗಳಾಗಿದ್ದು, ಅವರ ಬಳಿಯಿದ್ದ 6000 ರೂಪಾಯಿ ನಗದನ್ನು ದುಷ್ಕರ್ಮಿಗಳು ಬಲವಂತವಾಗಿ ತೆಗೆದುಕೊಂಡಿದ್ದಾರೆ.

ಸೋನ್ಸ್ ಪೊಲೀಸರಿಗೆ ದೂರು ನೀಡಿದ್ದು, “ನಾನು ಕುಳೂರಿನಿಂದ ಟ್ಯಾಂಕರ್ ಅನ್ನು ಚಲಾಯಿಸುತ್ತಿದ್ದಾಗ ಖಾಸಗಿ ಬಸ್‌ನಿಂದ ವ್ಯಕ್ತಿಯೊಬ್ಬ ಇಳಿದು ಟ್ಯಾಂಕರ್ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ನಾನು ನಿಲ್ಲಿಸದೆ ಮುಂದೆ ಹೋದಾಗ ಕಾರೋಂದು ಬಂದು ನನ್ನ ಗಾಡಿಗೆ ಅಡ್ಡ ಹಾಕಿ ಮೂವರು ವ್ಯಕ್ತಿಗಳು ಕಾರಿನಿಂದ ಇಳಿದು, ಟ್ರಕ್‌ನಿಂದ ನನ್ನ ವ್ಯಾಲೆಟ್ ಮತ್ತು ದಾಖಲೆಗಳನ್ನು ಕಸಿದುಕೊಂಡು, ನಂತರ ನನ್ನನ್ನು ವಾಹನದಿಂದ ಹೊರಗೆಳೆದು ಹಲ್ಲೆಗೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಸದ್ಯ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!