August 12, 2026

ಪುತ್ತೂರು: ಬರ್ತ್ ಡೇ ಪಾರ್ಟಿ ನಡೆಸುತ್ತಿದ್ದವರ ಮೇಲೆ ಮಾರಕಾಯುಧ ಹಿಡಿದು ದಾಳಿ: ವೀಡಿಯೋ ವೈರಲ್‌

0
image_editor_output_image-1249827973-1686400992664.jpg

ಪುತ್ತೂರು: ಬರ್ತ್ ಡೇ ಪಾರ್ಟಿ ನಡೆಸುತ್ತಿದ್ದವರ ಮೇಲೆ ಮಾರಕಾಯುಧ ಹಿಡಿದು ದಾಳಿ ನಡೆಸಿದ ಘಟನೆ ಪುತ್ತೂರಿನಲ್ಲಿ ನಡೆದಿದ್ದು, ಈ ಕುರಿತ ವೀಡಿಯೋ ವೈರಲ್‌ ಆಗಿದೆ.

ಪುತ್ತೂರಿನ ದರ್ಬೆ ಬಳಿ ಹೊಟೇಲ್‌ ಒಂದರಲ್ಲಿ ರಾತ್ರಿ ವೇಳೆ ಬರ್ತ್‌ ಡೇ ಪಾರ್ಟಿ ಆಯೋಜನೆಯಾಗಿದ್ದು, ಈ ಸಂದರ್ಭದಲ್ಲಿ ಯುವಕನೊಬ್ಬ ಮಾರಕಾಯುಧ ಹಿಡಿದು ದಾಳಿ ನಡೆಸಿದ್ದಾನೆ.

ದಾಳಿಯ ಸಂದರ್ಭದಲ್ಲಿ ಓರ್ವ ಯುವಕ ತಪ್ಪಿಸಿಕೊಳ್ಳುವ ಭರದಲ್ಲಿ ಸ್ಟೇರ್‌ ಕೇಸ್‌ ನಿಂದ ಜಾರಿ ಬಿದ್ದು ಗಾಯಗೊಂಡಿದ್ದಾನೆ.

ಭೂಗತ ಪಾತಕಿಗಳ ಶಿಷ್ಯ ಎನ್ನಲಾದ ಪ್ರಜ್ವಲ್‌ ಎಂಬಾತ ಮಾರಕಾಯುಧ ಹಿಡಿದು ದಾಳಿ ನಡೆಸಿದ್ದಾನೆ ಎಂದು ಹೇಳಲಾಗಿದೆ.

ನಿನ್ನೆ ರಾತ್ರಿ ನಡೆದ ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಭೂಗತ ಲೋಕದ ಡಾನ್ ಗಳ ಹೆಸರಿನಲ್ಲಿ ಹಾಗೂ ವಿದೇಶದಿಂದ ಬಂದ ಸೂಚನೆ ಮೇರೆಗೆ ದಾಳಿ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!