ಕೋರ್ಟ್‌ನ ಕೊಠಡಿಯಲ್ಲೇ ಗುಂಡು ಹಾರಿಸಿ ಗ್ಯಾಂಗ್‍ಸ್ಟರ್ ನ ಕೊಲೆ
ಲಕ್ನೋ: ಗ್ಯಾಂಗ್‍ಸ್ಟರ್ ಮುಕ್ತರ್ ಸಹಚರನನ್ನು ಕೋರ್ಟ್‌ನ ಕೊಠಡಿಯಲ್ಲೇ ಗುಂಡು ಹಾರಿಸಿ ಕೊಲೆಗೈದ ಘಟನೆ ಉತ್ತರ ಪ್ರದೇಶದ ಕೈಸರ್‌ಬಾಗ್ ಸ್ಥಳೀಯ ನ್ಯಾಯಾಲಯದಲ್ಲಿ ನಡೆದಿದೆ.
ವಕೀಲರ ವೇಷದಲ್ಲಿ ಬಂದ ಹಂತಕರು ಏಕಾಏಕಿ ಗ್ಯಾಂಗ್‍ಸ್ಟರ್ ಸಂಜೀವ್ ಜೀವಾ ಮೇಲೆ ಗುಂಡು ಹಾರಿಸಿದ್ದಾರೆ.
ಈ ವೇಳೆ ನೆಲಕ್ಕೆ ಕುಸಿದ ಆತನ ರಕ್ತಸ್ರಾವವನ್ನು ತಡೆಯಲು ಅಧಿಕಾರಿಗಳು ಪ್ರಯತ್ನಪಟ್ಟಿದ್ದಾರೆ. ಆದರೆ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಲ್ಲದೇ ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿಯ ಕಾಲಿಗೆ ಗುಂಡು ತಗುಲಿದೆ.




