ಮಡಿಕೇರಿ:ನೇಣುಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆ ಸುಂಟಿಕೊಪ್ಪದಲ್ಲಿ ನಡೆದಿದೆ.
ಬಾಳೆಕಾಡು ತೋಟದ ನಿವಾಸಿ ಕಪಾಲಿ ಮುರುಗೇಶ್ ಅವರ ಪುತ್ರ ವಿಜಯ (23) ಮೃತ ದುರ್ದೈವಿ. ಈತ ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ. ಸೋಮವಾರ ಸಂಜೆ ತೋಟದ ಮರ ಒಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.