August 13, 2026

ನಿಂತಿದ್ದ ಲಾರಿಗೆ ಕ್ರೂಸರ್ ಢಿಕ್ಕಿ: ಐವರು ಸ್ಥಳದಲ್ಲೇ ಮೃತ್ಯು

0
image_editor_output_image-1526489012-1686027152581.jpg

ಯಾದಗಿರಿ: ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150 (ಚಿ) ನಲ್ಲಿ ನಡೆದಿದೆ.

ಮುನೀರ್(40), ನಯಾಮತ್ (40), ಮುದ್ದತ್ ಶಿರ್ (12), ರಮಿಜಾ ಬೇಗಂ (50), ಸುಮ್ಮಿ (12) ಮೃತ ದುರ್ದೈವಿಗಳು. ಮೃತಪಟ್ಟ 5 ಮಂದಿ ಸಂಬಂಧಿಕರಾಗಿದ್ದಾರೆ.

ಆಂಧ್ರಪ್ರದೇಶದ ಬಂಡಿ ಆತ್ಮಕೂರು ಗ್ರಾಮದ ತಂದೆ ಮುನೀರ್ ಹಾಗೂ ಪುತ್ರ ಮುದ್ದಸಿರ್ ಇಬ್ಬರೂ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ವೆಲುಗೋಡ ಗ್ರಾಮದ ಮೂವರು ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!