ಮಂಗಳೂರಿನಿಂದ ಗೇರುಬೀಜ ಹೇರಿಕೊಂಡ ಲಾರಿ ಉಡುಪಿಯಲ್ಲಿ ಪಲ್ಟಿ
ಉಡುಪಿ: ಗೇರುಬೀಜ ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಉಡುಪಿ ಸಮೀಪದ ಬಲಾಯಿಪಾದೆ ಜಂಕ್ಷನ್ ನಲ್ಲಿ ನಡೆದಿದೆ.
ಉಡುಪಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ಅವಘಡ ಸಂಭವಿಸಿದೆ.
ಮಂಗಳೂರಿನಿಂದ ಗೇರು ಬೀಜ ಹೇರಿಕೊಂಡ ಲಾರಿಯು ಉಡುಪಿ ಕಡೆಗೆ ಸಂಚರಿಸುತ್ತಿತ್ತು ಎಂದು ತಿಳಿದು ಬಂದಿದೆ.
ಚಾಲಕನ ನಿಯಂತ್ರಣ ತಪ್ಪಿ ಲಾರಿ ಮಗುಚಿ ಬಿದ್ದಿದೆ ಎನ್ನಲಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೇಷ್ಟೇ ತಿಳಿದು ಬರಬೇಕಾಗಿದೆ.