ಮಂಗಳೂರು: ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ, ಕಾರು ಸಹಿತ 23 ಕೆಜಿ ಗಾಂಜಾ ವಶಕ್ಕೆ
ಮಂಗಳೂರು: ಆಂಧ್ರ ಪ್ರದೇಶದಿಂದ ಮಂಗಳೂರು ಮತ್ತು ಕೇರಳಕ್ಕೆ ನಿಷೇಧಿತ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳೂರು ಸಿಸಿಬಿ ಬಂಧಿಸಿದೆ.
ಬಂಧಿತನಿಂದ ಸುಮಾರು 23 ಕೆಜಿ ಗಾಂಜಾವನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ಕಾಸರಗೋಡು ಜಿಲ್ಲೆಯ ಮೊಯಿದ್ದೀನ್ ಶಬೀರ್ (35) ಎಂದು ಗುರುತಿಸಲಾಗಿದೆ.
ಶಬೀರ್ ವಿಶಾಖಪಟ್ಟಣದಿಂದ ಕಾರಿನ ಮೂಲಕ ಬೆಂಗಳೂರು ಮಾರ್ಗವಾಗಿ ಮಂಗಳೂರಿಗೆ ಗಾಂಜಾ ಸಾಗಾಟ ಮಾಡುತ್ತಿದಾಗ ಉಳ್ಳಾಲ ಮುಡಿಪು ಕಾಯಿರಗೋಳಿ ಎಂಬಲ್ಲಿ ಸಿಸಿಬಿ ಪೊಲೀಸರ ತಂಡ ಸೆರೆ ಹಿಡಿದಿದೆ.
ಈತ ಬಳಿಯಿಂದ ಒಟ್ಟು 12,96, 470 ರೂ ಮೌಲ್ಯದ 23 ಕೆಜಿ ಗಾಂಜಾ, ಮಹೀಂದ್ರ ಕಾರು ಮತ್ತು ಎರಡು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಶಬೀರ್ ವಿರುದ್ಧ ಕಾಸರಗೋಡು, ಮಂಜೇಶ್ವರ, ಕುಂಬ್ಳೆ ಮತ್ತು ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಿ ಕೊಲೆ ಸೇರಿ 12 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.