ದತ್ತಾತ್ರೇಯನ ಸನ್ನಿಧಿಯಲ್ಲಿ ಭಕ್ತರ ತಲೆಯ ಮೇಲೆ ಕಾಲಿಟ್ಟು ದೌರ್ಜನ್ಯ
ಕಲಬುರಗಿ: ಮಾಜಿ ಪ್ರಧಾನಿ, ಅನೇಕ ಮಾಜಿ ಸಿಎಂಗಳ ನೆಚ್ಚಿನ ದೇವಸ್ಥಾನ ಗಾಣಗಾಪುರದ ದತ್ತಾತ್ರೇಯನ ಸನ್ನಿಧಿಯಲ್ಲಿ ಪುಡಿ ರೌಡಿಯೊಬ್ಬ ಭಕ್ತರ ಮೇಲೆ ದೌರ್ಜನ್ಯ ನಡೆಸಿದ್ದಾನೆ.
ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ದೇಶದ ವಿವಿಧೆಡೆಯಿಂದ ಸಾವಿರಾರು ಭಕ್ತರು ಬರುತ್ತಾರೆ. ಆದರೆ ಇದೇ ದೇವಸ್ಥಾನದ ಸಂಗಮ ಸ್ಥಳದಲ್ಲಿ ಪುಡಿರೌಡಿ ಯಲ್ಲಪ್ಪ ಕಲ್ಲೂರ್ ಭಕ್ತರ ತಲೆ ಮೇಲೆ ಕಾಲಿಟ್ಟು ದೌರ್ಜನ್ಯ ತೋರಿ, ಅಟ್ಟಹಾಸ ಮೆರೆದಿದ್ದಾನೆ.