August 12, 2026

ಬಾಲಕಿಯ ಖಾಸಗಿ ಪೋಟೊ ಸೆರೆಹಿಡಿದು ಬ್ಲ್ಯಾಕ್ ಮೇಲ್: ಇಬ್ಬರು ಆರೋಪಿಗಳ ಬಂಧನ

0
image_editor_output_image771853211-1684485225067.jpg

ತಿರುವನಂತಪುರಂ: ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೀತಿಸುವ ನೆಪದಲ್ಲಿ ಆಕೆಯನ್ನು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಇಬ್ಬರನ್ನು ಪೂವಾರ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಆದಿತ್ಯನ್ (18) ಹಾಗೂ ಸೂರ್ಯ (18) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇನ್ನಿಬ್ಬರು ಪಾಲುದಾರರಾಗಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ತಾನು ನಿನ್ನ ಪ್ರೀತಿಸುವುದಾಗಿ ನಂಬಿಸಿ ಅಪ್ರಾಪ್ತೆಯ ಜೊತೆಗಿನ ಕೆಲವೊಂದಷ್ಟು ಫೋಟೋಗಳನ್ನು ಪಡೆದುಕೊಳ್ಳುತ್ತಾನೆ.

ಬಳಿಕ ತನ್ನ ಗೆಳೆಯರಿಗೆ ಆ ಫೋಟೋಗಳನ್ನು ಕಳುಹಿಸುತ್ತಾನೆ. ಇದೀಗ ನಾಲ್ವರು ಅಪ್ರಾಪ್ತೆಯ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿದ್ದಾರೆ ಎಂಬುದಾಗಿ ತನಿಖೆಯ ವೇಳೆ ಬಯಲಾಗಿದೆ.

ಇಷ್ಟು ಮಾತ್ರವಲ್ಲದೆ ಆರೋಪಿಗಳು ಅಪ್ರಾಪ್ತೆಗೆ ಬೆದರಿಕೆ ಹಾಕಿ 5 ಸಾವಿರ ರೂ. ಪಟಾಯಿಸಿಕೊಂಡಿದ್ದಾರೆ. ಈ ಎಲ್ಲಾ ಘಟನೆಯ ಬಳಿಕ ಬಾಲಕಿ ತನ್ನ ಪೋಷಕರ ಮುಂದೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಆ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರು ಆರೋಪಿಗಳ ವಿರುದ್ಧ ಪೂವಾರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!