ಕೋಣೆಯೊಳಗೆ ಕೂಡಿ ಹಾಕಿದ್ದ ಮಹಿಳೆಯನ್ನು ರಕ್ಷಿಸಲು ಬಂದ ಪೊಲೀಸ್ ನ ಮೂಗನ್ನೇ ಮುರಿದ ವ್ಯಕ್ತಿ
ತಿರುವನಂತಪುರಂ: ಕೋಣೆಯೊಳಗೆ ಕೂಡಿ ಹಾಕಿದ್ದ ಪತ್ನಿಯನ್ನು ರಕ್ಷಿಸಲು ಬಂದ ಪೊಲೀಸ್ ಅಧಿಕಾರಿಯ ಮೂಗನ್ನೇ ಮುರಿದ ಪ್ರಸಂಗವೊಂದು ಕೇರಳದ ಕೊಟ್ಟಾಯಂ ನಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಮೇ 14 ರಂದು ರಾತ್ರಿ 10.15ರ ಸುಮಾರಿಗೆ ಪಂಪಾಡಿಯ ವೆಲ್ಲೂರು 8ನೇ ಮೈಲಿನಲ್ಲಿ ಈ ಘಟನೆ ನಡೆದಿದೆ.
ಜಿಬಿನ್ ಲೋಬೋ ಹಲ್ಲೆಗೊಳಗಾದ ಪೊಲೀಸ್ ಅಧಿಕಾರಿ. ಇವರು ಪಾಪಂಡಿ ಪೊಲೀಸ್ ಠಾಣೆಯ ಸೀನಿಯರ್ ಆಫೀಸರ್ ಆಗಿದ್ದಾರೆ.
ಸ್ಯಾಮ್ ಝಕರಿಯಾ (42) ಹಲ್ಲೆ ಮಾಡಿದ ವ್ಯಕ್ತಿಯಾಗಿದ್ದು, ಈತ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದನು. ಹಲ್ಲೆಯಿಂದಾಗಿ ಅಧಿಕಾರಿಯ ಮೂಗು ಮುರಿದು ಹೋಗಿದೆ. ಅಲ್ಲದೆ ಕಣ್ಣಿಗೂ ಗಾಯಗಳಾಗಿವೆ.




