March 16, 2026

ಶಿವಮೊಗ್ಗ: ಬಿಜೆಪಿಗೆ ವೋಟ್ ಹಾಕಿದ್ದಕ್ಕೆ ಆಟೋ ಚಾಲಕನಿಗೆ ಹಲ್ಲೆ: ಆಟೊ ರಿಕ್ಷಾ ಜಖಂ

0
image_editor_output_image537437673-1684215254837.jpg

ಶಿವಮೊಗ್ಗ: ಬಿಜೆಪಿಗೆ ವೋಟ್ ಹಾಕಿದೆ ಎಂದು ಹೇಳಿದ್ದಕ್ಕೆ ಆಟೋ ಚಾಲಕನೊಬ್ಬನ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ದ ಸೋಮಿನಕೊಪ್ಪ ಬಡಾವಣೆಯಲ್ಲಿ ಇಂದು (ಸೋಮವಾರ) ಬೆಳಗ್ಗೆ ನಡೆದಿದೆ.

ಆಟೋ ಚಾಲಕ ಹರೀಶ್ ರಾವ್ ಎಂಬಾತ ಆಟೋ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಮೂವರು ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಯಾರಿಗೆ ವೋಟ್ ಹಾಕಿದೆ ಎಂದು ದುಷ್ಕರ್ಮಿಗಳು ಹರೀಶ್‍ನನ್ನು ಕೇಳಿದ್ದಾರೆ.

ಈ ವೇಳೆ ಆತ ಬಿಜೆಪಿಗೆ ಎಂದಿದ್ದಾನೆ. ಇದೇ ಕಾರಣಕ್ಕೆ ಹರೀಶ್‍ಗೆ ಹಿಗ್ಗಾಮುಗ್ ಥಳಿಸಿದ ದುಷ್ಕರ್ಮಿಗಳು ಆಟೋವನ್ನು ಜಖಂಗೊಳಿಸಿದ್ದಾರೆ. ಅಲ್ಲದೆ ರಾಡ್ ನಿಂದ ಆಟೋ ಗಾಜು ಜಖಂಗೊಳಿಸಿ, ಮೇಲ್ಭಾಗದ ಶೀಟ್ ಅನ್ನು ಹರಿದು ಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!