March 16, 2026

ಬೆಳ್ತಂಗಡಿ: ನೇತ್ರಾವತಿ ನದಿ ನೀರಿನಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ಹೋಗಿ ನೀರಿಗೆ ಬಿದ್ದು ತಂದೆ ಮೃತ್ಯು

0
water-drowning-hands-sea-wallpaper-thumb.jpg

ಬೆಳ್ತಂಗಡಿ: ನೇತ್ರಾವತಿ ನದಿ ನೀರಿನಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ಹೋಗಿ ತಂದೆಯೋರ್ವರು ನೀರಿನಲ್ಲಿ ಮುಳುಗಿ ಮೃತಟ್ಟ ಘಟನೆ ನಡೆದಿದೆ.

ಹಾಸನದ ಹರಳಹಳ್ಳಿಯ ಕೃಷ್ಣಪ್ಪ ಗೌಡ ಎಚ್‌.ಟಿ. (52) ತನ್ನ ಪತ್ನಿ ಮಗನೊಂದಿಗೆ ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದರು. ಈ ವೇಳೆ ಪತ್ನಿ ಹಾಗೂ ಮಗನಿಗೆ ನೀರಿನಿಂದ ಮೇಲೆ ಬರಲಾಗದೆ ಚಡಪಡಿಸುತ್ತಿದ್ದರು. ಅವರನ್ನು ಮೇಲೆಳೆದು ಅವರ ಪ್ರಾಣ ರಕ್ಷಿಸಿದ ಕೃಷ್ಣಪ್ಪ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.

ಇನ್ನು ಘಟನೆ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಮೃತದೇಹವನ್ನು ನದಿಯಿಂದ ಮೇಲೆತ್ತಲು ವಿಪತ್ತು ನಿರ್ವಹಣ ತಂಡದ ಸದಸ್ಯರು ಸಹಕರಿಸಿದರು.”

Leave a Reply

Your email address will not be published. Required fields are marked *

error: Content is protected !!