August 15, 2026

ಪುತ್ತೂರು ಕಾಂಗ್ರೆಸ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪುತ್ತಿಲಗೆ ಅಭಿನಂದನೆ

0
image_editor_output_image-2094690550-1684131694831.jpg

ಪುತ್ತೂರು: ಶನಿವಾರ ಸಂಜೆ ಕಾಂಗ್ರೆಸ್ ಗೆಲುವಿನ ಶೋಭಾಯಾತ್ರೆ ನಡೆಯುತ್ತಿತ್ತು. ಅಷ್ಟರಲ್ಲಿ ಎದುರಿನಿಂದ ಪಕ್ಷೇತರವಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಅವರ ಕಾರು ಆಗಮಿಸಿತು. ಹಿಂದುತ್ವ – ಕಾಂಗ್ರೆಸ್ ಕಾರ್ಯಕರ್ತರು ಎದುರು – ಬದುರಾದರೆ ಹೇಗೆ? ಆತಂಕ ಬೇಡ. ಅರುಣ್ ಕುಮಾರ್ ಪುತ್ತಿಲ ಅವರು ಜನನಾಯಕ ಎನ್ನುವುದು ಮತ್ತೊಮ್ಮೆ ಸಾಬೀತಾಗುವ ಪ್ರಸಂಗಕ್ಕೆ ಈ ಘಟನೆ ಸಾಕ್ಷಿಯಾಯಿತು.

ಕಾಂಗ್ರೆಸ್ ಕಾರ್ಯಕರ್ತರು, ಪುತ್ತಿಲ ಅವರಿಗೆ ಕೈ ಬೀಸಿ ತಮ್ಮ ಪ್ರೀತಿ ತೋರಿದರು. ಅರುಣ್ ಕುಮಾರ್ ಪುತ್ತಿಲ ಅವರು ಕೈಮುಗಿದು, ಅವರ ಪ್ರೀತಿಗೆ ತಲೆಬಾಗಿದರು. ಇನ್ನೂ ಕೆಲವರು ಪುತ್ತಿಲ ಅವರಿಗೆ ಕೈ ಕುಲುಕಿ ತಮ್ಮ ಪ್ರೀತಿಯನ್ನು ತೋರಿದರು.

ಅರುಣ್ ಕುಮಾರ್ ಪುತ್ತಿಲ ಅವರು ಸರ್ವ ಪಕ್ಷಗಳ, ಸರ್ವಧರ್ಮೀಯರ ಪ್ರೀತಿ ಗಳಿಸಿದ್ದಾರೆ ಎನ್ನುವುದಕ್ಕೆ ಇದು ನಿದರ್ಶನವಾಯಿತು.

ಒಟ್ಟಿನಲ್ಲಿ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಬಳಿಕ ಅರುಣ್ ಕುಮಾರ್ ಪುತ್ತಿಲ ಅವರ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೀಗ ಸಂಸದ ಅಭ್ಯರ್ಥಿಯಾಗಿಯೂ ಕಣಕ್ಕೆ ಇಳಿಯಬೇಕು ಎನ್ನುವ ಪ್ರೀತಿಯ ಒತ್ತಾಯ ಅಭಿಮಾನಿಗಳಿಂದ ಕೇಳಿಬರುತ್ತಿದ್ದು, ಮುಂದಿನ ನಡೆ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

You may have missed

error: Content is protected !!