August 15, 2026

ಟ್ರಕ್ ಟ್ರೇಲರ್, ವ್ಯಾನ್ ನಡುವಿನ ಭೀಕರ ಅಪಘಾತ: 26 ಮಂದಿ ಮೃತ್ಯು

0
image_editor_output_image304497899-1684130587782.jpg

ಮೆಕ್ಸಿಕೋ: ಟ್ರಕ್ ಟ್ರೇಲರ್ ಮತ್ತು ವ್ಯಾನ್ ನಡುವಿನ ಭೀಕರ ಸಂಭವಿಸಿದ ಅಪಘಾತದಲ್ಲಿ 26 ಮಂದಿ ಮೃತಪಟ್ಟಿರುವ ಘಟನೆ ಭಾನುವಾರ ಉತ್ತರ ಮೆಕ್ಸಿಕನ್ ನ ತಮೌಲಿಪಾಸ್‌ನಲ್ಲಿ ನಡೆದಿರುವುದು ವರದಿಯಾಗಿದೆ

ಖಾಸಗಿ ಸಾರಿಗೆ ಸಂಸ್ಥೆಗೆ ಸೇರಿದ ವ್ಯಾನ್ ಮಕ್ಕಳು ಸೇರಿದಂತೆ ಹಲವು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಟ್ರಕ್ ಟ್ರೇಲರ್ ಮತ್ತು ವ್ಯಾನ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ 26 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಮೃತರ ಕೆಲವರ ಗುರುತುಗಳನ್ನು ಇನ್ನೂ ಪತ್ತೆ ಹಚ್ಚಬೇಕಿದ್ದು, ಅಪಘಾತದಲ್ಲಿ ಟ್ರಕ್‌ನ ಚಾಲಕ ಕೂಡ ಸಾವನ್ನಪ್ಪಿದ್ದಾನೆಯೇ ಅಥವಾ ಅವನು ಪರಾರಿಯಾಗಿದ್ದಾನೆಯೇ ಎಂಬುದು ಖಚಿತವಾಗಿಲ್ಲ. ಅಧಿಕಾರಿಗಳು ಸತ್ತವರ ರಾಷ್ಟ್ರೀಯ ಗುರುತಿನ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ, ಅವರಲ್ಲಿ ಹೆಚ್ಚಿನವರು ಮೆಕ್ಸಿಕನ್ನರು ಎಂದು ರಾಯಿಟರ್ಸ್‌ ವರದಿ ತಿಳಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!