October 4, 2026

ವಿಟ್ಲ: ಸುರಿಬೈಲು ಅಶ್ ಅರಿಯ್ಯ ಶೈಖುನಾ  ಮರ್ಹೂಂ ಸುರಿಬೈಲ್ ಉಸ್ತಾದ್ ಅವರ 25ನೇ ಆಂಡ್ ನೇರ್ಚೆ ಸಮಾರೋಪ ಮತ್ತು ಸಂದಲ್ ಮೆರವಣಿಗೆ

0
image_editor_output_image2048728813-1791108888784

ವಿಟ್ಲ: ಸುರಿಬೈಲ್ ಅಶ್ ಅರಿಯ್ಯ ಮರ್ಹೂಂ ಶೈಖುನಾ ಸುರಿಬೈಲ್ ಉಸ್ತಾದ್ 25 ನೇರ್ಚೆ ಸಮಾರೋಪ ಕಾರ್ಯಕ್ರಮ ನಡೆಯಿತು.

ಅಕ್ಟೋಬರ್ 2 ರಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಸಮಾರೋಪ ದಿನ ಕಲ್ಪನೆ ರಹ್ಮಾನೀಯ ಜುಮ್ಮಾ ಮಸೀದಿಯಲ್ಲಿ ಸೈಯದ್ ಮುಶ್ತಾಖ್ ರಹ್ಮಾನ್ ತಂಙಳ್ ಚಟ್ಟಕಲ್ ರವರ ಪ್ರಾರ್ಥನೆಯೊಂದಿಗೆ ರ‍್ಯಾಲಿಗೆ ಚಾಲನೆ ನೀಡಲಾಯಿತು.

 

ಈ ರ‍್ಯಾಲಿಯಲ್ಲಿ ರಶೀದ್ ಹನೀಫಿ ಉಸ್ತಾದರಿಗೆ ಪತಾಕೆ ನೀಡುವ ಮೂಲಕ ಚಾಲನೆ ನೀಡಿಲಾಯಿತು.

ರ‍್ಯಾಲಿಯಲ್ಲಿ , ಸೈಯದ್ ಮದಕ ತಂಙಳ್,ನಡಿಬೈಲ್ ತಂಙಳ್ , ಮುಹಮ್ಮದ್ ಅಲಿ ಸಖಾಫಿ ಅಶ್ ಅರಿಯ, ಬೋಳಂತೂರು ಖತೀಬ್ ಮಜೀದ್ ಕಾಮಿಲ್ ಸಖಾಫಿ, ಸಂಸ್ಥೆಯ ಅಧ್ಯಕ್ಷ ವಾಲೆಮುಂಡೋವ್ ಉಸ್ತಾದ್, ಬೊಳ್ಮಾರ್ ಉಸ್ತಾದ್, ಯೂಸುಫ್ ಮದನಿ ಮೊಗ್ರಾಲ್, ಸೇರಿದಂತೆ ಹಲವು ಸೈಯದರು ಮತ್ತು ಉಲಮಾಗಳು ಭಾಗವಹಿಸಿದ್ದರು.

ಸಂದಲ್ ಶೇಖರಿಸಿ ಸಂಸ್ಥೆಗೆ ನೀಡುವುದರೊಂದಿಗೆ, ನೂರಾರು ಮೊಹಲ್ಲಾಗಳ ಕಾರ್ಯಕರ್ತರು, ಸಂಘಟಕರು, ಪದಾಧಿಕಾರಿಗಳು, ಖತೀಬ್ ಉಸ್ತಾದರು ಸೇರಿದಂತೆ ನೂರಾರು ಕಾರ್ಯಕರ್ತರ ಭಾಗವಹಿಸಿದ್ದರು.

ಮಗ್ರಿಬ್ ನಮಾಜಿನ ಬಳಿಕ ಸೈಯದ್ ಪೂಕೂಞ್ಞಿ ತಂಙಳ್ ಉದ್ಯಾವರ ನೇತೃತ್ವದಲ್ಲಿ ಜಿಯಾರತ್ ನಡೆಯಿತು.

ಬಳಿಕ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೈಯದ್ ಶರಫು ಸಾದಾತ್ ಸೈಯದ್ ಅಶ್ರಫ್ ತಂಙಳ್ ಆದೂರು ಸಮಾರಂಭವನ್ನು ಉದ್ಘಾಟಿಸಿದರು.

ದಾರುಲ್ ಅಶ್ಅರಿಯಾ ಸಂಸ್ಥೆಗಾಗಿ ಕಳೆದ 27 ವರ್ಷಗಳಿಂದ ಅವಿರತವಾಗಿ ದುಡಿಯುತ್ತಿರುವ ಮೊಹಮ್ಮದ್ ಅಲಿ ಸಖಾಫಿ ಅಶ್ಅರಿಯಾ ಅವರಿಗೆ ಹಳೆ ವಿದ್ಯಾರ್ಥಿಗಳಿಂದ ಕಾರನ್ನು ನೀಡುವ ಮೂಲಕ ಗೌರವಾರ್ಪಣೆ ನಡೆಸಲಾಯಿತು.

ದೀನೀ ಸೇವೆಯಲ್ಲಿ ಅರ್ಧ ಶತಕ ಪೂರ್ಥಿಗೊಳಿಸಿದ ಅಬ್ಬಾಸ್ ಮುಸ್ಲಿಯಾರ್ ಬೋಳಂತೂರು ಅವರಿಗೆ ಗೌರವಾರ್ಪಣೆ ನಡೆಯಿತು.

ಮೌಲಾನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಿದರು.

ನಂತರ ಸೈಯದ್ ಜಲಾಲುದ್ದೀನ್ ತಂಙಳ್ , ಮೌಲಾನಾ ಶಾಫಿ ಸ ಅದಿ, ಮೊಹಮ್ಮದ್ಲಿ ಸಖಾಫಿ ಅಶ್ಅರಿಯಾ, ಈ ಕಾರ್ಯಕ್ರಮದಲ್ಲಿ ಸೈಯದ್ ಇಬ್ರಾಹಿಂ ಪೂಕುಞ್ಞಿ ತಂಗಳು ಉದ್ಯಾವರ, ಸಂಸ್ಥೆಯ ಅಧ್ಯಕ್ಷರಾದ ವಾಲೆಮುಂಡೋವ್ ಉಸ್ತಾದ್ ಹಾಗೂ ಬೊಳ್ಮಾರ್ ಉಸ್ತಾದ್ ಅವರ ಉಪಸ್ಥಿತಿಯಲ್ಲಿ ಕೀ ಹಸ್ತಾಂತರಿಸಲಾಯಿತು. ಆಂಡ್ ನೇರ್ಚೆ ಸ್ವಾಗತ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.

ಕೆ. ಮುಹಿಯುದ್ದೀನ್ ಕಾಮಿಲ್ ಸಖಾಫಿ ನಡೆಸಿದರು.ಮುಹಮ್ಮದ್ ಅಲಿ ಸಖಾಫಿ ವಂದಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!