August 15, 2026

ಗ್ಯಾಸ್ ಸಿಲಿಂಡರ್, ಅನ್ನಭಾಗ್ಯ ಕಡಿತ, ಮುಸ್ಲಿಮರ ಮೀಸಲಾತಿ ರದ್ದತಿಯಿಂದ ಬಿಜೆಪಿ ಸೋಲಿಗೆ ಕಾರಣ: ಎಸ್.ಟಿ.ಸೋಮಶೇಖರ್

0
image_editor_output_image1606715553-1684133309661.jpg

ಮಂಡ್ಯ: ‘ಅಡುಗೆ ಅನಿಲ ಸಿಲಿಂಡರ್‌ ಬೆಲೆ ಏರಿಕೆ, ‘ಅನ್ನಭಾಗ್ಯ’ ಯೋಜನೆಯಲ್ಲಿ ನೀಡುವ ಅಕ್ಕಿಯ ಪ್ರಮಾಣ ಕಡಿಮೆ ಮಾಡಿದ್ದು, ಮುಸ್ಲಿಮರ ಮೀಸಲಾತಿ ತೆಗೆದದ್ದು ಮೊದಲಾದ ಕಾರಣಗಳಿಂದ ಬಿಜೆಪಿ ಸೋತಿರಬಹುದು’ ಎಂದು ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಭಾನುವಾರ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಭಾನು ವಾರ ಮಾತನಾಡಿದ ಅವರು, ‘ಹಳ್ಳಿಗಳಿಗೆ ಹೋದಾಗಲೆಲ್ಲಾ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಏರಿಕೆ, ಅಕ್ಕಿ ಕಡಿಮೆ ಮಾಡಿರುವ ಬಗ್ಗೆ ಮಹಿಳೆಯರು ದೂರುತ್ತಿದ್ದರು.

ಹಲಾಲ್‌ ಕಟ್‌ ವಿಚಾರದಲ್ಲೂ ಜನರಿಗೆ ಕೋಪ ಇತ್ತು. ಮುಸ್ಲಿಮರ ಶೇ 4ರಷ್ಟು ಮೀಸಲಾತಿ ತೆಗೆದದ್ದು ತಪ್ಪಾಗಿರ ಬಹುದು. ಆದರೆ, ನನ್ನ ಕ್ಷೇತ್ರದಲ್ಲಿ ಮುಸ್ಲಿಮರು ಬಿಜೆಪಿ ಪರವಾಗಿದ್ದರು’ ಎಂದು ತಿಳಿಸಿದರು.

‘ಕಾಂಗ್ರೆಸ್‌ನವರು ನಮ್ಮ ವಿರುದ್ಧ ವ್ಯಾಪಕ ಅಪಪ್ರಚಾರ ಮಾಡಿದರು. 40 ಪರ್ಸೆಂಟ್‌ ಸರ್ಕಾರ, ಪೇಸಿಎಂ ಎಂದೆಲ್ಲಾ ಸುಳ್ಳು ಸುದ್ದಿ ಹಬ್ಬಿಸಿದರು’ ಎಂದು ದೂರಿದರು.

‘ಚಿಕ್ಕಬಳ್ಳಾಪುರದಲ್ಲಿ ಡಾ.ಸುಧಾಕರ್‌ ಉತ್ತಮ ಕೆಲಸ ಮಾಡಿದ್ದರು. ಆದರೆ, ಅವರ ಸೋಲಿಗೆ ಕಾರಣವೇ ತಿಳಿಯುತ್ತಿಲ್ಲ’ ಎಂದರು.

Leave a Reply

Your email address will not be published. Required fields are marked *

You may have missed

error: Content is protected !!