September 30, 2026

ಕಲ್ಲಡ್ಕ : ಬಹಾದ್ದೂರ್ ಗ್ರೂಪ್ ಆಫ್ ಕಂಪೆನಿ ಹಾಗೂ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಾಲೆಗೆ ಮಿನಿ ಬಸ್ ಸಾರ್ವಜನಿಕ ಸೇವೆಗೆ ಅಂಬುಲೆನ್ಸ್ ಹಸ್ತಾಂತರ

0
image_editor_output_image-66617674-1786724761060

ಬಂಟ್ವಾಳ : ಬಹಾದ್ದೂರ್ ಗ್ರೂಪ್ ಆಫ್ ಕಂಪೆನಿ ಹಾಗೂ ಬಹಾದ್ದೂರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಡುಗೆಯಾಗಿ ನೀಡಿದ, ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಅಧೀನದ ಅಲ್ ಬಿರ್ರ್ ಶಾಲೆಗೆ ಟಾಟಾ ಮ್ಯಾಜಿಕ್ ಮಿನಿ ವ್ಯಾನ್ ಹಾಗೂ ಸಾರ್ವಜನಿಕ ಸೇವೆಗಾಗಿ ಅಂಬುಲೆನ್ಸ್ ಅನ್ನು ಶುಕ್ರವಾರ ಕಲ್ಲಡ್ಕ ಮಸೀದಿ ವಠಾರದಲ್ಲಿ ಲೋಕಾರ್ಪಣೆ ಗೊಳಿಸಲಾಯಿತು.

 

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ಸಯ್ಯಿದ್ ಅಲಿ ಮನ್ನಾನಿ ಅವರು ಮಾತನಾಡಿ, ದಾನ ಧರ್ಮವು ಮಾನವನ ಎಲ್ಲಾ ಸಂಕಷ್ಟಗಳಿಗೆ ಪರಿಹಾರವಾಗಿದ್ದು, ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಮಾಡುವುದರ ಮೂಲಕ ಜೀವನ ಪಾವನಗೊಳಿಸಿ ಎಂದರು.

ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪನಾಮಾ ಮಾತನಾಡಿ, ಪ್ರಸ್ತುತ ವರ್ಷದಲ್ಲಿ ಅಲ್ ಬಿರ್ರ್ ಶಾಲೆಯನ್ನು ಪ್ರಾರಂಭಿಸಲಾಗಿದ್ದು ಶಾಲಾ ವಾಹನದ ಅತೀ ಅಗತ್ಯತೆಯ ಬಗ್ಗೆ ಝೈನುಲ್ ಆಬಿದ್ ಅವರನ್ನು ಸಂಪರ್ಕಿಸಿದಾಗ ಅದಕ್ಕೆ ತಕ್ಷಣ ಸ್ಪಂದಿಸುವುದರ ಜೊತೆಗೆ ಯಾವುದೇ ಜಾತಿ ಧರ್ಮದ ಬೇಧವಿಲ್ಲದೆ ಕಲ್ಲಡ್ಕದ ಎಲ್ಲಾ ನಾಗರಿಕರ ತುರ್ತು ಚಿಕಿತ್ಸೆಯ ಅಗತ್ಯ ಸೇವೆಗಾಗಿ ಅಂಬುಲೆನ್ಸ್ ಅನ್ನು ಕೂಡ ಕೊಡುಗೆಯಾಗಿ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.

ಬಹಾದ್ದೂರ್ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಶರ್ಫುದ್ದೀನ್ ಅವರು ಕಲ್ಲಡ್ಕ ಮಸೀದಿ ಅಧ್ಯಕ್ಷ ಅಬ್ದುಲ್ಲಾ ಹಾಜಿ ಕೋಡಿ ಅವರಿಗೆ ವಾಹನಗಳ ಕೀಲಿ ಕೈ ಹಸ್ತಾಂತರಿಸಿದರು.

ಮಸೀದಿ ಉಪಾಧ್ಯಕ್ಷ ಅಬೂಬಕ್ಕರ್ ಮುರಬೈಲ್, ಕೋಶಾಧಿಕಾರಿ ಜವಾಝ್, ಜೊತೆ ಕಾರ್ಯದರ್ಶಿಗಳಾದ ಸಾದಿಕ್, ಫವಾಝ್ ಸನ್ ಲೈಟ್, ಅಲ್ ಬಿರ್ರ್ ಶಾಲಾ ಕೋ ಆರ್ಡಿನೇಟರ್ ಝಕರಿಯಾ ಗೋಳ್ತಮಜಲು, ಬಹಾದ್ದೂರ್ ಚಾರಿಟೇಬಲ್ ಟ್ರಸ್ಟ್ ನ ಪ್ರಮುಖರಾದ ಅಬ್ದುಲ್ ಅಝೀಝ್ ಮದನಿ, ಉಮ್ಮರಬ್ಬ ಇರಾ, ಖಲೀಲ್ ಬಹಾದ್ದೂರ್, ಕಬೀರ್ ಬಹಾದ್ದೂರ್ ಹಾಗೂ ಶಾಫಿ ಕಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.

ಮನ್ಸೂರ್ ಕಲ್ಲಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!