March 24, 2026

ಇನ್ನು ಮುಂದೆ ‘ಕರೆಂಟ್ ಬಿಲ್ ನೆನಪು ಮಾತ್ರ’:
ಸೋಷಿಯಲ್ ಮೀಡಿಯಾದಲ್ಲಿ ಕರೆಂಟ್ ಬಿಲ್ಲಿಗೆ ಶ್ರದ್ಧಾಂಜಲಿ ಅರ್ಪಿಸಿ ಫೋಟೋ ವೈರಲ್

0
IMG-20230514-WA0135.jpg

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಕಾಂಗ್ರೆಸ್ ಪಕ್ಷವು ಮ್ಯಾಜಿಕ್ ನಂಬರ್ ದಾಟಿ ಬರೋಬ್ಬರಿ ಐತಿಹಾಸಿಕ ದಾಖಲೆ ಎನ್ನುವಂತೆ 135 ಸ್ಥಾನವನ್ನು ಗೆದ್ದುಕೊಂಡಿದೆ. ಇದೇ ಹೊತ್ತಿನಲ್ಲಿ ಕಾಂಗ್ರೆಸ್ ಘೋಷಿಸಿದಂತ ಗ್ಯಾರಂಟಿಗಳಲ್ಲಿ 200 ಯೂನಿಟ್ ವಿದ್ಯುತ್ ಉಚಿತದ ಮೀಮ್ಸ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಹೀಗೆ ಕಾಂಗ್ರೆಸ್ ಪಕ್ಷದಿಂದ ಘೋಷಿಸಿದ್ದಂತ ಗ್ಯಾರಂಟಿ ಯೋಜನೆಗಳಲ್ಲಿ ಗೃಹ ಜ್ಯೋತಿ ಗ್ಯಾರಂಟಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಟೋವೊಂದು ವೈರಲ್ ಆಗಿದೆ. ಅದರಲ್ಲಿ ಇನ್ನು ಮುಂದೆ ಕರೆಂಟ್ ಬಿಲ್ ನೆನಪು ಮಾತ್ರ ಎಂದು ಹೇಳಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಲಾಗಿದೆ ಎನ್ನುವಂತಹ ಫೋಟೋ ವೈರಲ್ ಆಗಿದೆ.

ಗೃಹ ಜ್ಯೋತಿ – ಈ ಗ್ಯಾರಂಟಿ ಅಡಿಯಲ್ಲಿ ನಿಮ್ಮ ಮನೆಗೆ 200 ಯೂನಿಟ್ ವಿದ್ಯುತ್ ಪ್ರತಿ ತಿಂಗಳು ಉಚಿತವಾಗಿ ನೀಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು.

Leave a Reply

Your email address will not be published. Required fields are marked *

error: Content is protected !!