March 17, 2026

ಜಯನಗರದಲ್ಲಿ ಗೆದ್ದು ಸೋತ ಸೌಮ್ಯ ರೆಡ್ಡಿ: ಒಟ್ಟು ಕಾಂಗ್ರೆಸ್135, ಬಿಜೆಪಿ 65, ಜೆಡಿಎಸ್ 19 ಸ್ಥಾನ

0
IMG-20230514-WA0003.jpg

ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶವನ್ನು ಚುನಾವಣಾ ಆಯೋಗ ತಡರಾತ್ರಿ 12.30ರ ವೇಳೆ ಪ್ರಕಟಿಸಿದ್ದು, ಅನೇಕ ಬಾರಿ ಮರು ಎಣಿಕೆಯ ಬಳಿಕ 16 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮೂರ್ತಿ ಗೆಲುವು ಸಾಧಿಸಿದ್ದಾರೆ .

ಈ ಗೆಲುವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾರೆಡ್ಡಿ ಹೇಳಿದ್ದಾರೆ.

ಇನ್ನು ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮೂರ್ತಿಗೆ 57,797 ಮತಗಳು ಮತ್ತು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿಗೆ 57,781 ಮತ ಲಭಿಸಿದೆ.

ಇದೀಗ 224 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ 135, ಬಿಜೆಪಿ 66, ಜೆಡಿಎಸ್ 19, ಪಕ್ಷೇತರ 4 ಕ್ಷೇತ್ರಗಳಲ್ಲಿ ಗೆಲುವು ಪಡೆದಿದೆ.

Leave a Reply

Your email address will not be published. Required fields are marked *

error: Content is protected !!