March 16, 2026

ಉಡುಪಿ: ಮಗುವಿನ ಮೇಲೆ ಬೀದಿನಾಯಿ ದಾಳಿ – ಆಸ್ಪತ್ರೆಗೆ ದಾಖಲು

0
IMG-20230512-WA0022.jpg

ಉಡುಪಿ: ಉಚ್ಚಿಲದ ಪೊಲ್ಯ ಎಂಬಲ್ಲಿ ಬೀದಿ ನಾಯಿಯೊಂದು ಪುಟ್ಟ ಮಗುವಿನ ಮೇಲೆ ದಾಳಿ ನಡೆಸಿದ ಪರಿಣಾಮ ಮಗು ತೀವ್ರವಾಗಿ ಗಾಯಗೊಂಡ ಘಟನೆ ಇಂದು ಸಂಜೆ ನಡೆದಿದೆ.

ಗಾಯಗೊಂಡ ಮಗುವನ್ನು ಅಜ್ಜರಕಾಡು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಪೊಲ್ಯ ಪರಿಸರದಲ್ಲಿ ಬೀದಿ ನಾಯಿಗಳ‌ ಕಾಟ ಹೆಚ್ಚಿದ್ದು ಹಲವರಿಗೆ ಕಚ್ಚಿರುವುದಾಗಿ ಗ್ರಾಮಸ್ಥರು ದೂರಿದ್ದಾರೆ.

ಇನ್ನು ಘಟನೆಯಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದು, ಕೂಡಲೇ ಬೀದಿನಾಯಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!