March 16, 2026

ಉಳ್ಳಾಲ: ಮಾನಸಿಕ ಖಿನ್ನತೆಯಿಂದ ಅವಿವಾಹಿತ ವ್ಯಕ್ತಿ ಆತ್ಮಹತ್ಯೆ

0
IMG-20230512-WA0023.jpg

ಉಳ್ಳಾಲ: ಅವಿವಾಹಿತರೊಬ್ಬರು ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಗೈದ ಘಟನೆ ನರಿಂಗಾನ‌ ಗ್ರಾಮದ ಬೋಳದಲ್ಲಿ ನಡೆದಿದೆ. ಬೋಳ ನಿವಾಸಿ ಭೌತಿಸ್ ಡಿಸೋಜ(63) ಆತ್ಮಹತ್ಯೆಗೈದವರು.

ಅವಿವಾಹಿತರಾಗಿದ್ದ ಭೌತಿಸ್ ಡಿಸೋಜರಿಗೆ ಕುಡಿತದ ಚಟವಿದ್ದು ತನ್ನ‌ ಸ್ವಂತ ಮನೆ ಧರಾಶಾಹಿಯಾದ ಬಳಿಕ ಅಕ್ಕನ ಮನೆಯಲ್ಲಿ ವಾಸವಿದ್ದರು. ಶುಕ್ರವಾರ ಬೆಳಗ್ಗೆ ಮನೆ ಮಂದಿ‌ ಎದ್ದು ನೋಡಿದಾಗ ಮನೆಯ ಹೊರಗಡೆ ಪಕ್ಕಾಸಿಗೆ ನೇಣುಬಿಗಿದು ಆತ್ಮಹತ್ಯೆಗೈದಿದ್ದರು. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಅಂತಿಮ ಸಂಸ್ಕಾರ ನಡೆಯಿತು.

Leave a Reply

Your email address will not be published. Required fields are marked *

error: Content is protected !!