March 16, 2026

ನಟ ಶಾರುಖ್‌ ಖಾನ್‌ ಪುತ್ರನ ರಕ್ಷಣೆಗೆ 25 ಕೋಟಿ ರೂ. ಲಂಚ ಅರೋಪ: NCB ಮಾಜಿ ಅಧಿಕಾರಿ ವಿರುದ್ಧ ಎಫ್ಐಆರ್

0
medium_2023-05-12-058417bb9f.jpg

ನವದೆಹಲಿ: ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರ ಮಗ ಆರ್ಯನ್‌ ಖಾನ್‌ ಅವರನ್ನು ಡ್ರಗ್ಸ್‌ ಪಾರ್ಟಿ ಪ್ರಕರಣದಿಂದ ರಕ್ಷಿಸಲು ₹ 25 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಮಾದಕ ದ್ರವ್ಯ ನಿಯಂತ್ರಣ ದಳದ ಮಾಜಿ ಅಧಿಕಾರಿ ಸಮೀರ್‌ ವಾಂಖೆಡೆ ವಿರುದ್ಧ ಕೇಂದ್ರೀಯ ತನಿಖಾ ದಳ ಎಫ್‌ಐಆರ್‌ ದಾಖಲಿಸಿಕೊಂಡಿದೆ.

ಕಾರ್ಡೇಲಿಯಾ ಹಡಗಿನ ಮೇಲೆ ದಾಳಿ ನಡೆಸಿದ್ದ ವಾಂಖೆಡೆ ನೇತೃತ್ವದ ಎನ್‌ಸಿಬಿ ಅಧಿಕಾರಿಗಳ ತಂಡ, ಹಡಗಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಬೆದರಿಕೆ ಹಾಕಿತ್ತು ಮತ್ತು ₹ 25 ಕೋಟಿ ನೀಡುವಂತೆ ಆರ್ಯನ್‌ ಖಾನ್‌ ಕುಟುಂಬಕ್ಕೆ ಬೇಡಿಕೆ ಇಟ್ಟಿತ್ತು. ಭ್ರಷ್ಟಾಚಾರ ಮತ್ತು ವಿವಿಧ ನಿಯಮಗಳ ಅಡಿಯಲ್ಲಿ ವಾಂಖೆಡೆ ಹಾಗೂ ಇತರ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಸಿಬಿಐ ಉನ್ನತ ಮೂಲಗಳು ತಿಳಿಸಿವೆ.

ಒಟ್ಟು ₹ 25 ಕೋಟಿಯಲ್ಲಿ ₹ 50 ಲಕ್ಷವನ್ನು ಖಾನ್‌ ಕುಟುಂಬ ಎನ್‌ಸಿಬಿ ಅಧಿಕಾರಿಗಳಿಗೆ ನೀಡಿತ್ತು. ಆರ್ಯನ್‌ ರಕ್ಷಣೆಗಾಗಿ ₹ 50 ಲಕ್ಷ ನೀಡಿರುವುದಾಗಿ ಅವರ ಕುಟುಂಬ ಹೇಳಿಕೆ ನೀಡಿದೆ ಎಂದೂ ಮಾಹಿತಿ ನೀಡಿವೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ವಾಂಖೆಡೆ ಸಂಪರ್ಕಕ್ಕೆ ಸಿಗಲಿಲ್ಲ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮುಂಬೈ, ದೆಹಲಿ, ರಾಂಚಿ, ಕಾನ್ಪುರ ಸೇರಿದಂತೆ 29ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. 2021ರ ಅಕ್ಟೋಬರ್ 2ರಂದು ವಾಂಖೆಡೆ ನೇತೃತ್ವದ ತಂಡವು ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿತ್ತು.

Leave a Reply

Your email address will not be published. Required fields are marked *

error: Content is protected !!