March 16, 2026

ಸುಪ್ರೀಂ ಕೋರ್ಟ್‌ ನಿವೃತ್ತ ಸಿಜೆಐ ರಂಜನ್‌ ಗೊಗೋಯ್‌ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು

0
66049168.jpg

ನವದೆಹಲಿ: ರಾಜ್ಯಸಭಾ ಸಂಸದ, ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಅವರ ವಿರುದ್ಧ ಅಸ್ಸಾಂ ಲೋಕೋಪಯೋಗಿ (ಎಪಿಡಬ್ಲ್ಯು) ಅಧ್ಯಕ್ಷ ಅಭಿಜಿತ್‌ ಶರ್ಮಾ 1 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆಂದು ವರದಿಯಾಗಿದೆ.

ಗೊಗೋಯ್‌ ಅವರ ಆತ್ಮಕಥೆ “ಜಸ್ಟೀಸ್‌ ಫಾರ್‌ಎ ಜಡ್ಜ್’ ಪುಸ್ತಕ ಇನ್ನೇನು ಬಿಡು ಗಡೆಯಾಗಬೇಕಿತ್ತು. ಆದರೆ ಪುಸ್ತಕದಲ್ಲಿ ತಮ್ಮ ವಿರುದ್ಧ ಗೊಗೋಯ್‌ ಅವಮಾನಕರ ಉಲ್ಲೇಖಗಳನ್ನು ಮಾಡಿದ್ದಾರೆ ಎಂದು ಅಭಿಜಿತ್‌ ಆರೋಪಿ ಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪುಸ್ತಕ ಬಿಡುಗಡೆಗೂ ತಡೆ ಕೋರಿ ಅರ್ಜಿ ಸಲ್ಲಿಸಿದ್ದು, ಗೊಗೋಯ್‌ ಹಾಗೂ ಪುಸ್ತಕದ ಪ್ರಕಾಶಕರಾದ ರೂಪಾ ಪಬ್ಲಿಕೇಶನ್ಸ್‌ ಅವರ ವಿರುದ್ಧವೂ ಮೊಕದ್ದಮೆ ದಾಖಲಿಸಿದ್ದಾರೆ. ಅರ್ಜಿದಾರರು ಹಾಗೂ ಪ್ರತಿವಾದಿಗಳಿಬ್ಬರಿಗೂ ಸಮನ್ಸ್‌ ಜಾರಿಗೊಳಿಸಲಾಗಿದೆ. ಮುಂದಿನ ವಿಚಾರಣೆಯನ್ನು ಜೂನ್‌ 3ಕ್ಕೆ ನಿಗದಿಪಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!