March 16, 2026

ಶಿವಮೊಗ್ಗ: ಡೆತ್ ನೋಟ್  ಬರೆದಿಟ್ಟು ಚಿನ್ನಾಭರಣ ವ್ಯಾಪಾರಿ  ವಿಷ ಸೇವಿಸಿ ಆತ್ಮಹತ್ಯೆ

0
image_editor_output_image1342760936-1683695287423.jpg

ಶಿವಮೊಗ್ಗ: ಡೆತ್ ನೋಟ್ ಬರೆದಿಟ್ಟು ಚಿನ್ನಾಭರಣ ವ್ಯಾಪಾರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಕೃಷ್ಣಕುಮಾರ್ ಕುರ್ದೇಕರ್ (41) ಆತ್ಮಹತ್ಯೆಗೆ ಶರಣಾದ ವ್ಯಾಪಾರಿ.

ಇವರು ನಗರದ ಸಿದ್ದಯ್ಯ ರಸ್ತೆಯ ಕಾಡುವೀರಪ್ಪ ಕಂಪೌಂಡ್ ನಿವಾಸಿಯಾಗಿದ್ದು, 18 ವರ್ಷಗಳಿಂದ ಚಿನ್ನ, ಬೆಳ್ಳಿ ವ್ಯಾಪಾರ ನಡೆಸುತ್ತಿದ್ದರು. ಡೆತ್ ನೋಟಿನಲ್ಲಿ ಪ್ರಶಾಂತ್ ಮೋರೆ ಹಾಗೂ ಗಣೇಶ್ ಎಂಬವರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೃಷ್ಣಕುಮಾರ್ ಕುರ್ದೇಕರ್ ಚಿನ್ನಾಭರಣವನ್ನು ಪ್ರಶಾಂತ್ ಮತ್ತು ಗಣೇಶ್‌ಗೆ ಕೊಟ್ಟಿದ್ದರೂ ಚಿನ್ನಾಭರಣವನ್ನ ನೀಡಿಲ್ಲವೆಂದು ಇಬ್ಬರೂ ಕೃಷ್ಣಕುಮಾರ್‌ಗೆ ಈ ಹಿಂದೆ ಹೊಡೆದಿರುವುದಾಗಿ ಆರೋಪಿಸಲಾಗಿದೆ.

ಇದನ್ನು ಮನಸ್ಸಿನಲ್ಲಿಟ್ಟುಕೊಂಡ ಕೃಷ್ಣಕುಮಾರ್ ತಮ್ಮ ಮನೆಯ ಬಚ್ಚಲು ಮನೆಯಲ್ಲಿ ವಿಷ ಸೇವಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆ ಕುರಿತು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!