July 13, 2026

ಕೇರಳ: ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಪಲ್ಟಿ: 6 ಮಕ್ಕಳು ಸೇರಿ, 21 ಮಂದಿ ಮೃತ್ಯು

0
n4975458881683521995667da689fe6a26007668a3f58c645f3f10927ad2b483a78723c248a458da15b628c.jpg

ಮಲಪ್ಪುರಂ: ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಪಲ್ಟಿಯಾಗಿ 21 ಮಂದಿ ಸಾವನ್ನಪ್ಪಿರುವ ಘಟನೆ ಮಲಪ್ಪುರಂನ ತಾನೂರ್ ತೂವಲ್ತಿರಾದಲ್ಲಿ ನಡೆದಿದೆ.

6 ಮಕ್ಕಳು, ಮಹಿಳೆಯರು ಹಾಗೂ ಪುರುಷರು ಸೇರಿದಂತೆ 21 ಮಂದಿ ಸಾವನ್ನಪ್ಪಿದ್ದಾರೆ. 20 ಮಂದಿಯನ್ನು ರಕ್ಷಿಸಲಾಗಿದೆ. ಇನ್ನು ಹಲವರು ನಾಪತ್ತೆಯಾಗಿದ್ದಾರೆ. ದೋಣಿಯಲ್ಲಿ 40ಕ್ಕೂ ಹೆಚ್ಚು ಮಂದಿ ಇದ್ದರು ಎನ್ನಲಾಗಿದ್ದು ಇನ್ನು ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.

ರಜಾ ದಿನವಾಗಿದ್ದರಿಂದ ಇಲ್ಲಿಗೆ ಕುಟುಂಬ ಸಮೇತ ಹಲವರು ಬೋಟಿಂಗ್ ಗೆ ಆಗಮಿಸಿದ್ದರು. ರಕ್ಷಿಸಲ್ಪಟ್ಟವರನ್ನು ಪರಪ್ಪನಂಗಡಿ ಮತ್ತು ತನೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ರಾತ್ರಿಯಾಗಿರುವುದರಿಂದ ರಕ್ಷಣಾ ಕಾರ್ಯಕ್ಕೆ ತೊಂದರೆಯಾಗಿದೆ. ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮೃತ ಇಬ್ಬರ ಮೃತದೇಹಗಳನ್ನು ತಿರುರಂಗಡಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!