May 28, 2026

ಕಾಸರಗೋಡು: ಜೂಜಾಟಕ್ಕೆ ಪೊಲೀಸ್‌ ದಾಳಿ: ತಪ್ಪಿಸಿಕೊಂಡು ಓಡುವಾಗ ಬಾವಿಗೆ ಬಿದ್ದು ಯುವಕ ಮೃತ್ಯು

0
IMG-20230507-WA0039.jpg

ಕಾಸರಗೋಡು: ಜೂಜಾಟಕ್ಕೆ ಪೊಲೀಸ್‌ ದಾಳಿ ನಡೆಸಿದಾಗ ಭೀತಿಯಿಂದ ಓಡುವ ಭರದಲ್ಲಿ ಬಾವಿಗೆ ಬಿದ್ದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಕಾಸರಗೋಡಿನ ಎನ್ನಪ್ಪರದಲ್ಲಿ ನಡೆದಿದೆ.

ಕುಜಿಕ್ಕೋಲ್ ಮೂಲದ ವಿಷ್ಣು (24) ಮೃತ ಯುವಕ.

ಶನಿವಾರ ರಾತ್ರಿ ಎನ್ನಪ್ಪರದಲ್ಲಿ ಫುಟ್‌ ಬಾಲ್‌ ಆಡುತ್ತಿರುವಾಗ ಜೊತೆಗೆ ಜೂಜಾಟವನ್ನು ಆಡಿದ್ದಾರೆ. ಇದರಲ್ಲಿ ವಿಷ್ಣು ಅವರು ಕೂಡ ಭಾಗಿಯಾಗಿದ್ದಾರೆ. ಇದೇ ವೇಳೆ ಪೊಲೀಸರು ಅಲ್ಲಿಗೆ ಬಂದಿದ್ದಾರೆ. ಪೊಲೀಸರ ಏಕಾಏಕಿ ದಾಳಿಗೆ ಭೀತಿಯಿಂದ ಎಲ್ಲರೂ ಓಡಿದ್ದಾರೆ. ಪೊಲೀಸರನ್ನು ನೋಡಿ ಓಡುವಾಗ ಕತ್ತಲಿನಲ್ಲಿ ವಿಷ್ಣು ಬಾವಿಯೊಂದಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!