March 16, 2026

ಕೇಂದ್ರ ಸರ್ಕಾರದ ಮಾಜಿ ನೌಕರನ ಮನೆ ಮೇಲೆ ಸಿಬಿಐ ದಾಳಿ: 20 ಕೋಟಿ ರೂ. ವಶ

0
image_editor_output_image-1744800189-1683092857290.jpg

ನವದೆಹಲಿ: ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಾಜಿ ನೌಕರನ ಮನೆ ಮೇಲೆ ಸಿಬಿಐ ದಾಳಿ ನಡೆಸಿ 20 ಕೋಟಿ ರೂ. ವಶ ಪಡಿಸಿಕೊಂಡಿದೆ.

ಸಾರ್ವಜನಿಕ ವಲಯದ ನೀರು ಮತ್ತು ವಿದ್ಯುತ್ ಸಲಹಾ ಸೇವೆ ಲಿಮಿಟೆಡ್‍ನ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಜೇಂದರ್ ಕುಮಾರ್ ಗುಪ್ತಾ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ.

ಅವರಿಗೆ ಸೇರಿದ ವಿವಿಧ ರಾಜ್ಯಗಳ 19 ಸ್ಥಳಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ 20 ಕೋಟಿ ರೂ. ಗೂ ಅಧಿಕ ನಗದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!