March 16, 2026

ಕಾಸರಗೋಡು: ರಿಯಾಝ್ ಮೌಲವಿ ಹತ್ಯೆ ಪ್ರಕರಣ:
ಸ್ಪೆಷಲ್‌ ಪ್ರಾಸಿಕ್ಯೂಟರ್‌ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

0
05-1496634969-photo-2017-06-05-09-12-23.jpg

ಕಾಸರಗೋಡು: ರಿಯಾಸ್ ಮೌಲವಿ ಕೊಲೆ ಪ್ರಕರಣದಲ್ಲಿ ಸರಕಾರ ಪರ ವಾದಿಸುತ್ತಿದ್ದ ಸ್ಪೆಷಲ್‌ ಪ್ರಾಸಿಕ್ಯೂಟರ್‌ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೊಚ್ಚಿಯ ಫ್ಲ್ಯಾಟೊಂದರಲ್ಲಿ ನಡೆದಿದೆ‌.

ಮೂಲತಃ ಮಡಿಕೇರಿ ನಿವಾಸಿ ಹಾಗೂ ನಗರದ ಹಳೆ ಸೂರ್ಲಿನ ಮದ್ರಸಾ ಅಧ್ಯಾಪಕ ರಿಯಾಸ್ ಮೌಲವಿ (28) ಅವರನ್ನು 2017 ಮಾರ್ಚ್‌ 21ರಂದು ರಾತ್ರಿ ಹಳೆ ಸೂರ್ಲಿನಲ್ಲಿರುವ ಅವರ ವಾಸ ಸ್ಥಳದಲ್ಲಿ ಇರಿದು ಕೊಲೆಗೈಯಲಾಗಿತ್ತು.

ಪ್ರಕರಣದಲ್ಲಿ ಸರಕಾರ ಪರ ವಾದಿಸುತ್ತಿರುವ ಸ್ಪೆಷಲ್‌ ಪ್ರಾಸಿಕ್ಯೂಟರ್‌, ಕಲ್ಲಿಕೋಟೆ ಐಎಂಎ ಹಾಲ್‌ ರಸ್ತೆ ನಡಕ್ಕಾವು ನಿವಾಸಿ ನ್ಯಾಯವಾದಿ ಎಂ.ಅಶೋಕನ್‌ (60) ಅವರು ಕೊಚ್ಚಿಯ ಫ್ಲ್ಯಾಟೊಂದರಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಇವರು ಕೇಸೊಂದಕ್ಕೆ ಸಂಬಂಧಿಸಿ ವಾದಿಸಲು ಮಾವೇಲಿಕ್ಕರೆಗೆ ಹೋಗಿದ್ದರು. ಅಲ್ಲಿಂದ ಹಿಂದಿರುಗಿ ಬರುವ ಸಂದರ್ಭದಲ್ಲಿ ಕೊಚ್ಚಿಯ ಫ್ಲ್ಯಾಟೊಂದರಲ್ಲಿ ತಂಗಿದ್ದರು.ಅಲ್ಲಿ ಅವರು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಾವಿಗೆ ಹೃದಯಾಘಾತ ಕಾರಣವಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!