ಮಂಜೇಶ್ವರ: ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ಉತ್ತರ ಪ್ರದೇಶದಲ್ಲಿ ಪತ್ತೆ
ಮಂಜೇಶ್ವರ: ಒಂಬತ್ತು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ಯುವಕನೊಂದಿಗೆ ಉತ್ತರ ಪ್ರದೇಶದ ಲಖ್ನೋದಲ್ಲಿ ಪತ್ತೆಯಾಗಿದ್ದಾರೆ.
ಡಿವೈಎಸ್ಪಿ ಪಿ.ಕೆ ಸುಧಾಕರನ್ ನೇತೃತ್ವದ ತನಿಖಾ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಜೋಡಿಯನ್ನು ಉತ್ತರಪ್ರದೇಶದಲ್ಲಿ ಪತ್ತೆ ಹಚ್ಚಲಾಗಿದೆ. ಬಳಿಕ ಇಬ್ಬರನ್ನೂ ಕಾಸರಗೋಡಿಗೆ ಕರೆತರಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪಾವೂರು ಮೂಲದ ಸದ್ಯ ಮಂಜೇಶ್ವರದ ಫ್ಲಾಟ್ನಲ್ಲಿ ವಾಸಿಸುತ್ತಿರುವ ಕುಂಞಿಬಿ ಅಲಿಯಾಸ್ ಝಾಹಿದಾ (33) ಉತ್ತರ ಪ್ರದೇಶದ ಯುವಕನೊಂದಿಗೆ ಪತ್ತೆಯಾದ ಮಹಿಳೆಯಾಗಿದ್ದಾರೆ.
ಝಾಹಿದಾ ಒಂಬತ್ತು ತಿಂಗಳ ಹಿಂದೆ ತನ್ನ 12 ವರ್ಷದ ಮಗನನ್ನು ಶಾಲೆಗೆ ಬಿಟ್ಟು ಬಂದಿದ್ದರು. ನಂತರ ಮಂಗಳೂರಿನ ಆಯುರ್ವೇದ ಆಸ್ಪತ್ರೆಗೆ ಹೋಗಿ ಬರುವುದಾಗಿ ತಿಳಿಸಿ ನಾಪತ್ತೆಯಾಗಿದ್ದರು.




