February 3, 2026

ಪುತ್ತೂರು: ಶನಿ ಪೂಜೆಯಲ್ಲೇ ಶನಿ ಬಿಡಿಸಿದ್ದೇವೆ: ಅರುಣ್ ಕುಮಾರ್ ಪುತ್ತಿಲ ಕಾಲೆಳೆದ ಡಿ.ವಿ. ಸದಾನಂದ ಗೌಡ

0
IMG-20230502-WA0030.jpg

ಪುತ್ತೂರು: ಹಿಂದೆ ನಡೆದ ಶನಿಪೂಜೆಯಲ್ಲೇ ಶನಿ ಬಿಡಿಸಿದ್ದೇವೆ ಎಂದು ಹೆಸರು ಹೇಳದೇ ಅರುಣ್ ಕುಮಾರ್ ಪುತ್ತಿಲ ಅವರ ಅಭಿಮಾನಿಗಳಿಗೆ ಡಿ.ವಿ‌ ಸದಾನಂದ ಗೌಡ ಟಾಂಗ್ ನೀಡಿದರು.

ಟ್ವಿಟ್ಟರ್, ಫೇಸ್ ಬುಕಿನಲ್ಲಿ ಪುತ್ತೂರಿಗೆ ಬರುವಂತೆ ಸವಾಲು ಹಾಕಿ ಬರೆದಿದ್ದ ಸಾಲುಗಳ ಪುಟಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಮಾಜಿ ಸಿಎಂ ಡಿ.ವಿ‌ ಸದಾನಂದ ಗೌಡ, ಅರುಣ್ ಕುಮಾರ್ ಪುತ್ತಿಲ ಹಾಗೂ ಅಶೋಕ್ ಕುಮಾರ್ ರೈ ಅವರ ಹೆಸರು ಹೇಳದೇ ವಾಗ್ದಾಳಿ ನಡೆಸಿದರು.

ಡಿ.ವಿ. ಸದಾನಂದ ಗೌಡ ಅವರು ಪುತ್ತೂರಿನ ಶಾಸಕರಾಗಿದ್ದಾಗ ಪುತ್ತೂರು ಮಂಡಲ ಅಧ್ಯಕ್ಷರಾಗಿದ್ದವರನ್ನು ಪತ್ರಿಕಾಗೋಷ್ಠಿಯಲ್ಲಿ ಕುಳ್ಳಿರಿಸಿಯೇ ಪತ್ರಿಕಾಗೋಷ್ಠಿ ನಡೆಸಿಕೊಟ್ಟರು.

ನಾನು ಶಾಸಕರಾಗಿದ್ದಾಗ ಭಾಸ್ಕರ್ ಆಚಾರ್ ಹಿಂದಾರು, ಪುತ್ತಿಲ ಅವರು ಮುಂಡೂರು ಭಾಗದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡ್ತಾ ಇದ್ದರು. ಶನಿ ಪೂಜೆಯ ಸಂದರ್ಭ ಶನಿ ಬಿಡಿಸಿದ್ದೇವೆ ಎಂದರು. ಯಾಕಾಗಿ ಶನಿ ಬಿಡಿಸಿದ್ದೀರಿ ಎಂದು ಪ್ರಶ್ನಿಸಿದಾಗ, ಅದನ್ನು ಮಾಧ್ಯಮಗಳಲ್ಲಿ ಹಲವಾರು ಬಾರಿ ಬರೆಯಲಾಗಿದೆ. ಮತ್ತೊಮ್ಮೆ ವಿವರಣೆ ನೀಡುವ ಅಗತ್ಯವಿಲ್ಲ ಎಂದರು.

ಎನ್ ಕೌಂಟರ್ ಮಾಡ್ತಾರೆ ಎಂಬ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, ದೇಶ ವಿರೋಧಿ ಚಟುಚಟಿಕೆ ಮಾಡುವ ಯಾರನ್ನೇ ಆದರೂ ಬಿಡುವುದಿಲ್ಲ. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!